ರಕ್ತದಾನಕ್ಕೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಮೂಲಕ ಮಾನವೀಯತೆಯ ಬಾಂಧವ್ಯ ಬೆಸೆದ ಕರಾವಳಿ ಭಾಗದ ಯುವಕರ ತಂಡ
ಬ್ಲಡ್ ಡೋನರ್ಸ್ ಮಂಗಳೂರು (ರಿ) ನ ಏಳನೇ ವರ್ಷಕ್ಕೊಂದು ಅಕ್ಷರದ ಮುನ್ನುಡಿ. ಬರಹ: ಝಹೀರ್ ಶಾಂತಿನಗರ (ನೆನಪಿನ ನಾವಿಕ) ಹುಟ್ಟುವಾಗೀ ಧನವ ಮೊಟ್ಟೆಗಟ್ಟಿಳಿದನೇ? ಕಟ್ಟಕಡೆಯಲ್ಲಿ ಕೊಂಡೊಯ್ಯನಿದನರಿದು ಕೊಟ್ಟುಂಬ ದಾನಿ ಸರ್ವಜ್ಞ || ರಕ್ತದಾನ ಜೀವದಾನ ಎನ್ನುತ್ತಾರೆ ಆದರೆ ರಕ್ತದಾನ ಮಾಡಲು ಜನರು ಅತ್ಯಾವಶ್ಯಕ. ಈ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನಿಗಳಾಗಬೇಕು. ಈ ದಾನಿಗಳಿಗೆ ಒಬ್ಬ ನಾವಿಕ ಇರಬೇಕು. ಅದುವೇ ಬ್ಲಡ್ ಡೋನರ್ಸ್ ಮಂಗಳೂರು. ಇದೀಗ ಬ್ಲಡ್ ಡೋನರ್ಸ್ ಮಂಗಳೂರಿಗೆ 7 ನೇ ಸಂವತ್ಸರದ ಸಂಭ್ರಮ. ಇದರ ಹರುಷಕ್ಕೊಂದು ಅಕ್ಷರದ ಮುನ್ನುಡಿ ಈ ನನ್ನ ಪುಟ್ಟ ವರದಿ. ಬ್ಲಡ್ ಡೋನರ್ಸ್ ಮಂಗಳೂರು ಇದರ ಹುಟ್ಟು ಬೆಳವಣಿಗೆ: ಏಳು ವರ್ಷಗಳ ಹಿಂದೆ ಮಂಜೇಶ್ವರ ಮೂಲದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ಬಡ ಕುಟುಂಬದ ಒಂದು ಮಹಿಳೆಗೆ ರಕ್ತದ ಅವಶ್ಯಕತೆ ಇದ್ದಾಗ ಯಾರು ಕೂಡ ಮುಂದೆ ಬರುವುದಿಲ್ಲ. ಇದನ್ನು ಮನಗಂಡ ಸ್ನೇಹಿತರ ತಂಡ ಆಶ್ಚರ್ಯಚಕಿತವಾಗಿ ಬಿಡುತ್ತದೆ. ಆ ಮಹಿಳೆಯ ಸಂಬಂಧಿಕರು ಒಂದು ಯುನಿಟ್ ರಕ್ತಕ್ಕೆ ಒದ್ದಾಡುವಾಗ ಇನ್ನೂ ಹಲವಾರು ಜನರು, ಹಲವಾರು ಕಡೆ, ಎಷ್ಟು ಒದ್ದಾಟ ನಡೆಸಬಹುದು ಎಂಬ ಪ್ರಶ್ನೆ ಮೂಡ ತೊಡಗುತ್ತದೆ. ಆ ಸ್ನೇಹಿತರ ಬಳಗಕ್ಕೆ ಕಂಡದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ನಮ್ಮ ಪಾತ್ರ ಬಹಳ ಮುಖ್ಯ. ರಕ್ತದಾನದ ಜಾಗೃತಿಯನ್ನು ಮೂಡಿಸಿ ಆರೋಗ್ಯವಂತರು ಸ್ವಯಂ ಪ್ರೇರಿತ ರಕ್ತದಾನ ಮ...