ಏಪ್ರಿಲ್ 21 :- ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರ್ಝಾನ ಎಂಬ ಒಳರೋಗಿಗೆ ತುರ್ತಾಗಿ ಎ ನೆಗೆಟಿವ್ ರಕ್ತ ಬೇಕಾಗಿದ್ದಾಗ ನಮ್ಮ ಸಂಸ್ಥೆಯ ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸ ಹೊಂದಿರುವ ಸೃಜನಶೀಲ ವ್ಯಕ್ತಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸದಸ್ಯ ರಿಯಾಝ್ ಕಲ್ಲಾಪು ಅವರು ಇಂದು ಕೂಡ ಜೀವದಾನಿಯಾದರು.
ಅತೀ ವಿರಳವಾಗಿ ದೊರೆಯುವ ಹಾಗೂ ಕೋವಿಡ್ -19 ಸಂದರ್ಭದಲ್ಲಿ ತೀರಾ ಅಭಾವ ಕಾಣುವ ಎ ನೆಗೆಟಿವ್ ಗುಂಪಿನ ರಕ್ತದ ಅವಶ್ಯಕತೆಯಿರುವ ವೇಳೆ ಕ್ಲಪ್ತವಾಗಿ ಸ್ಪಂದಿಸಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :- ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment