ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!
ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ *ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ* ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು.
ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment