ಎಜಿಟಿ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಸಹಕಾರದೊಂದಿಗೆ ಪ್ರಥಮ ಚಾರ್ಟಡ್ ವಿಮಾನದಲ್ಲಿ ಆಗಮಿಸಿದ ಅನಿವಾಸಿ ಭಾರತೀಯರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯ ಸ್ವಾಗತ
ಆಗಸ್ಟ್ 29 ಮಂಗಳೂರು: ಎಜಿಟಿ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸಹಕಾರದಲ್ಲಿ ಇಂಡಿಗೋ ವಿಶೇಷ ಚಾರ್ಟರ್ ವಿಮಾನವು 174 ಪ್ರಯಾಣಿಕರನ್ನು ಹೊತ್ತು ಭಾನುವಾರ ಸೌದಿ ಕಾಲಮಾನ ಬೆಳಿಗ್ಗೆ 11 ಕ್ಕೆ ಹೊರಟು ಭಾರತೀಯ ಕಾಲಮಾನ ಸಂಜೆ 6:00 ಕ್ಕೆ ಘಂಟೆಗೆ ಮಂಗಳೂರು ತಲುಪಿದವು... ವಿಶೇಷ ವಿಮಾನದಲ್ಲಿ ಗರ್ಭಿಣಿ ಮಹಿಳೆಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಕೆಲಸ ಕಳೆದುಕೊಂಡವರಿಗೆ ಮೊದಲ ಆದ್ಯತೆ ನೀಡಲಾಗಿತ್ತು.ಪ್ರಯಾಣ ಮಾಡುವವರಿಗೆ ಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಎಜಿಟಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ಪರವಾಗಿ ನೀಡಲಾಯಿತು. ದಮ್ಮಾಮ್ ನಿಂದ ಅನಿವಾಸಿ ಭಾರತೀಯರನ್ನು ಬೀಳ್ಕೊಡಲು ಎಜಿಟಿ ಕಂಪೆನಿಯ ಅನ್ವರ್ ಸಾದಾತ್, ಸಂಶುದ್ದೀನ್ ಬೈರಿಕಟ್ಟೆ, ಅಝರ್ ಕೊಡಿಜಲ್, ಅನ್ಸಾರ್ ಕೊಡಿಜಲ್, ರಿಯಾಝ್ ಕೊಡಿಜಲ್, ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಸೌದಿ ಅರೇಬಿಯಾ ಕಾರ್ಯನಿರ್ವಾಹಕರಾದ ಫರ್ಝಾಾನ್ ಸಿದ್ಧಕಟ್ಟೆ,ಇರ್ಷಾದ್ ಉಚ್ಚಿಲ,ಹಫೀಝ್ ಕೆ.ಸಿ.ರೋಡ್,ಮುಝಮ್ಮಿಲ್ ಷಾ ಉಳ್ಳಾಲ,ನೌಫಲ್ ಬಜ್ಪೆ ಹಾಗೂ ರಿಯಲ್ ಟೆಕ್ ಕಂಪೆನಿ ಮುಖ್ಯಸ್ಥ ಇಸ್ಮಾಯಿಲ್ ಉಳ್ಳಾಲ,ಸಮಾಜ ಸೇವಕರಾದ ಫಾರೂಕ್ ಪೋರ್ಟ್ ಫೋಲಿಯೋ ಜುಬೈಲ್ ಮೊದಲಾದವರು ಉಪಸ್ಥಿತಿಯಲ್ಲಿ ಅನಿವಾಸಿ ಭಾರತೀಯ ಪ್ರಯಾಣಿಕರಿಗೆ ಶುಭ ಹಾರೈಸಲಾಯಿತು... ಅನಿವಾಸಿ ಭಾರತಿಯರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸ...