ದೇರಳಕಟ್ಟೆ ಆಗಸ್ಟ್ 15: ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಿಡಿಎಂ ಕಚೇರಿ ದೇರಳಕಟ್ಟೆ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ದ್ವಜಾಹರಣಗೈದು ಮಾತನಾಡಿದ ಇಸ್ಮಾಯಿಲ್.ಟಿ. ಪ್ರಾಚಾರ್ಯರು ಮದನಿ ವಿದ್ಯಾಸಂಸ್ಥೆ ಅಳೇಕಲ ಇವರು ನಮ್ಮ ದೇಶಕ್ಕಾಗಿ ಪ್ರಾಣವನ್ನು ಕೊಟ್ಟ ವಿರರನ್ನು ಸ್ಮರಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸತ್ತಾರ್ ಸಿ.ಎಂ. ನಿಕಟಪೂರ್ವ ಉಪಾಧ್ಯಕ್ಷರು ಬೆಳ್ಮ ಗ್ರಾಮ ಪಂಚಾಯತ್,ಕಬೀರ್.ಡಿ. ನಿಕಟಪೂರ್ವ ಸದಸ್ಯರು ಬೆಳ್ಮ ಗ್ರಾಮ ಪಂಚಾಯತ್,ರೌಫ್ ಸಿ.ಎಂ.ಅದ್ಯಕ್ಷರು ಯುವ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ,ಅಬ್ಬಾಸ್ ದೇರಳಕಟ್ಟೆ ಬಿಡಿಎಂ ಕಚೇರಿ ಮಾಲಕರು,ಸಿದ್ದೀಕ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು(ರಿ) ಫಯಾಝ್ ಮಾಡುರು ಹಾಗೂ ಕಾರ್ಯನಿರ್ವಾಹಕರು,ಮತ್ತು ಸದಸ್ಯರು ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
ಮಾಧ್ಯಮ ವಿಭಾಗ:ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment