ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ.
ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ.
ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.
ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ.
ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ.
ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ಕೊಟ್ಟು ಸಿಹಿ ತಿಂಡಿ ತಿನ್ನುವುದು , ಮಾಂಸಾಹಾರ ಸೇವಿಸುವುದು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದು ಇತ್ಯಾದಿ ಪ್ರಮುಖ ವಾಗಿರುತ್ತದೆ. ಈ ಮೂಲಕ ಪರಸ್ಪರ ಸ್ನೇಹ ಸಂಭಂಧ ವೃದ್ಧಿಸುವುದರೊಂದಿಗೆ ಸಂತೂಷ ಪಡುವುದು ಈ ಹಬ್ಬದ ವಿಶೇಷ.
ಅತಿವೇಗದಲ್ಲಿ ಹರಡುತ್ತಿರುವ ಕೊರೋಣವನ್ನು ನಿಯಂತ್ರಿಸಲು ಬದಲಾದ ದಿನಚರಿಯಲ್ಲಿ ಸಾಮಾಜಿಕ ಅಂತರ ಕಾಯಿದುಕೊಂಡು ಅನಗತ್ಯ ಮನೆಯಿಂದ ಹೊರಗೆ ಹೋಗದೆ ಸರಕಾರದ ಆದೇಶಗಳನ್ನು ಪಾಲಿಸುತ್ತಾ ಉಪವಾಸದ ವೃತಾಚರಣೆ ಎಲ್ಲ ಆರಾಧನೆಗಳನ್ನು(ನಮಾಜ್, ಜುಮ್ಮಾ ನಮಾಜ್, ತರಾವೀಃ, ಇತ್ಯಾದಿ) ಮನೆಯಲ್ಲಿಯೇ ನಿರ್ವಹಿಸಿ ಸಂಯಮವನ್ನು ಮುಸ್ಲಿಂ ಸಮಾಜ ಪ್ರದರ್ಶಿಸಿದೆ.
ಈದ್-ಉಲ್-ಫಿತರ್ ರಂಝಾಾನ್ ತಿಂಗಳಲ್ಲಿ ಪ್ರದರ್ಶಿಸಿದ ತ್ಯಾಗ ಸಂಯಮ ಇಂದು ಮನೆ ಮಂದಿಯೊಂದಿಗೆ ಸಂಭ್ರಮಿಸಿ ಮನೆಯಲ್ಲಿಯೇ ಆಚರಿಸಿ ಸಮಾಜದ ಮತ್ತು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ. ರೋಗಿಗಳಿಗೆ ಕೋವಿಡ್ ವಾರೀಯರ್ಸ್ ಗಳಿಗೆ ವೈಧ್ಯಕೀಯ ಸಿಬ್ಭಂಧಿಗಳಿಗೆ ಪೊಲಿಸರಿಗೆ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.
ಪ್ರೀತಿ, ವಿಶ್ವಾಸದ ಮೂಲಕ ಜಗತನ್ನೇ ಗೆದ್ದ ಪ್ರವಾದಿ ಮುಹಮ್ಮದ್(ಸ.ಆ) ಅವರ ಸಂದೇಶ ನಮಗೆಲ್ಲ ಮಾರ್ಗದರ್ಶನ ವಾಗಬೇಕಾಗಿದೆ.
ಪ್ರಕಟಣೆ: ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment