Skip to main content

Posts

Showing posts from July, 2020

ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ದಿನದಂದು ರಕ್ತದಾನ ಮಾಡಿದ ಅನಿವಾಸಿ ಭಾರತೀಯರು : ಬಹ್ರೈನ್ ಮಣ್ಣಿನಲ್ಲಿ 120 ಯುನಿಟ್ ರಕ್ತ ಸಂಗ್ರಹದೊಂದಿಗೆ ದಾಖಲೆ

ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ - ರಿ, ಬ್ಲಡ್ ಡೋನರ್ಸ್ ಮಂಗಳೂರು - ರಿ ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ / ಬಹ್ರೈನ್ ಇವರ ಸಹಯೋಗದೊಂದಿಗೆ ಜುಲೈ 31 ಶುಕ್ರವಾರ ಈದ್ ಹಬ್ಬದ ದಿನದಂದು ಬೆಳಿಗ್ಗೆ 7 :30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ "ಸಲ್ಮಾನಿಯಾ ರಕ್ತ ನಿಧಿ ಕೇಂದ್ರದಲ್ಲಿ" "ಬೃಹತ್ ರಕ್ತದಾನ ಶಿಬಿರ " ಜರುಗಿತು. ಕೋವಿಡ್ 19, ಕೊರೋನಾದ ಈ ಒಂದು ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ದೇಶ-ವಿದೇಶದ ರೋಗಿಗಳಿಗೆ ರಕ್ತದ ಅವಶ್ಯಕತೆಯಿದ್ದು, ಈ ಒಂದು ಶಿಬಿರದ ಆ ಯೋಜನೆಯ ಮೂಲಕ ರಕ್ತ ಪೋರೈಕೆಯ ಮೂಲ ಉದ್ದೇಶವಾಗಿತ್ತು. ಕಾರ್ಯಕ್ರಮ ಆಯೋಜಕರ ಕರೆಗೆ ಓಗೊಟ್ಟು ಬಹ್ರೈನ್ ಆನಿವಾಸಿ ನಿವಾಸಿಗಳು ಉತ್ತಮ ಸ್ಪಂದನೆ ನೀಡಿ ಸುಮಾರು 120 ಜನರು ರಕ್ತದಾನ ಮಾಡಿದರು. ಈ ಮೂಲಕ ಭಾರತೀಯ ಮೂಲದ ಸಂಘಟನೆ ಹೊಸ ದಾಖಲೆ ಸೃಷ್ಟಿಸಿತು. ವಿಶೇಷ: ಪ್ಲಾಸ್ಮ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ ಕಾಣುತ್ತಿದೆ.ಪ್ರಸ್ತುತ ಲಸಿಕೆ ಮತ್ತು ಔಷಧಿಯೇ ಇಲ್ಲದ ಮಾರಕ ಕೊರೋನಾ ವೈರಸ್ ಗೆ ಈ ವರೆಗೂ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಲಸಿಕೆ ಮತ್ತು ಔಷಧಿ ಇಲ್ಲದೆ ರೋಗಿಗಳಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಗೊಂದಲ ವೈದ್ಯರಲ್ಲಿದೆ.ಈ ಸಂಧರ್ಭದಲ್ಲಿ 12 ಮಂದಿ ಕೋವಿಡ್ 19 ಗುಣಮುಖ ರಕ್ತದಾನಿಗಳು ತಮ್ಮ ಶರೀರದಲ್ಲಿದ್ದ ಪ್ಲಾಸ್ಮ ರಕ್...

ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯಿಂದ ಬಕ್ರೀದ್ ಹಬ್ಬದ ಶುಭ ಸಂದೇಶ

ಜುಲೈ 31 ಶುಕ್ರವಾರ:ಮುಸ್ಲಿಮರ ಪವಿ ತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಇಂದು ವಿಶ್ವದಾದ್ಯಂತ ಕೊರೋನ ಮಾರಕ ರೋಗದ ನಡುವೆಯೂ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಹಲವು ದಿನಗಳ ಬಳಿಕ ಮಸೀದಿಯಲ್ಲಿ ಈದ್ ನಮಾಜನ್ನು ಸರಕಾರದ ನೀತಿ ನಿಯಮಗಳನ್ನು ಅನುಸರಿಸುವ ಮೂಲಕ ಮುಸ್ಲಿಮರು ಮಾರಕ ರೋಗದ ನಿರ್ಮೂಲನೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು ಬಕ್ರೀದ್ ಹಬ್ಬದ ಹಿನ್ನೆಲೆ : ಮುಸ್ಲಿಂ ಧರ್ಮೀಯರ ಪ್ರವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವೆಂದು ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಾರೆ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ಒಂದು ದಿನ ಪ್ರೀತಿಯ ಮಗನನ್ನು ಬಲಿ ಅರ್ಪಿಸು' ಎಂಬ ಸ್ವಪ್ನಾಜ್ಞೆಯು ಪ್ರವಾದಿ ಇಬ್ರಾಹಿಂ ಅವರಿಗೆ ಸಿಕ್ಕಿತ್ತು. ಹೀಗಾಗಿ, ದೇವಾಜ್ಞೆಯನ್ನು ಪಾಲಿಸಬೇಕೆಂದು ಇಬ್ರಾಹಿಂ ನಿರ್ಧರಿಸಿದ್ದರು. ಅದರಂತೆಯೇ ತನ್ನ ಪ್ರೀತಿಯ ಪುತ್ರ ಇಸ್ಮಾಯಿಲ್‌ರನ್ನು ಬಲಿ ಕೊಡಲು ಇವರು ಸಿದ್ಧರಾಗಿದ್ದರು. ಆದರೆ, ಇನ್ನೇನು ಬಲಿ ಅರ್ಪಿಸಬೇಕು ಎನ್ನುವಷ್ಟರಲ್ಲಿ ನಮ್ಮ ಆಜ್ಞೆಯನ್ನು ನೀನು ಪಾಲಿಸಿರುವೆ. ಹೀಗಾಗಿ, ನಿನ್ನ ಮಗನ ಬದಲು ಟಗರನ್ನು ಬಲಿ ಅರ್ಪಿಸು' ಎಂದು ಸಂತುಷ್ಟರಾದ...

ರೋಗಿಯ ಪಾಲಿಗೆ ಜೀವದಾನಿಯಾದ ಮನ್ಸೂರ್(ಮಂಚು)ಕೋಡಿಜಾಲ್

ಜುಲೈ 29 :- ಕಣಚೂರು ಆಸ್ಪತ್ರೆ ದೇರಳಕಟ್ಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಯಿಶಾ ಎಂಬ ಗರ್ಭಿಣಿ ಮಹಿಳೆಗೆ ತುರ್ತು ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯನಿರ್ವಾಹಕರ ಕರೆಗೆ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೆ ಇಟ್ಟು ರಕ್ತದಾನ ಮಾಡಲು ತಕ್ಷಣ ದಾವಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇದರ 24×7 ಕಾರ್ಯನಿರ್ವಾಹಕರಾದ ಮನ್ಸೂರ್(ಮಂಚು) ಕೋಡಿಜಾಲ್ ಇವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದರು. ತುರ್ತು ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ರಕ್ತದ ಕೊರತೆಯನ್ನರಿತು ರಕ್ತದಾನ ಮಾಡಿ ಮಾನವೀಯತೆ ಮೆರೆದ ಬಜಾಲ್ ಯುವಕರು

ಜುಲೈ 25 :- ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿಯಲ್ಲಿ ರಕ್ತದ ಕೊರತೆಯ ಮನವಿಗೆ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂಧಿಸಿ ಕಾರ್ಯಪ್ರವೃತ್ತರಾದ ಫಯಾಝ್ ಬಜಾಲ್ ಇವರ ನೇತೃತ್ವದಲ್ಲಿ ತಫ್ಸೀರ್ ಬಜಾಲ್,ಸಿರಾಜ್ ಬಜಾಲ್,ಅಝೀಝ್ ಬಜಾಲ್,ತೌಫಿಝ್ ಬಜಾಲ್,ಅನೀಶ್ ಬಜಾಲ್ ಸ್ವಯಂ ರಕ್ತದಾನ ಮಾಡಿ ಮಾನವೀಯತೆ ಮೆರೆದರು.ರಕ್ತದ ಅಭಾವವನ್ನರಿತು ರಕ್ತದಾನ ಮಾಡಿ ಮಾನವೀಯತೆ ಮೆರೆದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ರೋಗಿಗಳ ಪಾಲಿಗೆ ಜೀವದಾನಿಗಳಾದ ಝಮಾನ್ ಬೊಯ್ಸ್ ಕಲ್ಲಡ್ಕ ಯುವಕರು

ಜುಲೈ 25 :- ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾ ಆಚಾರ್ಯ ಎಂಬ ಮಹಿಳಾ ರೋಗಿಗೆ ತುರ್ತು ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂಧಿಸಿ ಇಂತಿಯಾಝ್ ಕಲ್ಲಡ್ಕ,ನಿಯಾಝ್ ಸೂರಜ್,ಇಬ್ರಾಹಿಂ ಕಲ್ಲಡ್ಕ ರಕ್ತದಾನ ಮಾಡಿ ರೋಗಿಗಳ ಪಾಲಿಗೆ ಜೀವದಾನಿಗಳಾದರು.ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಗಳಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಯುವಕನ ಜೀವ ಉಳಿಸಿದ "ಪಂಚ ಯುವಕರು"

ಜುಲೈ 23 ಗುರುವಾರ ಮಂಗಳೂರು: ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಕುಮಾರ್ ಶಿಕಾರಿಪುರ ಎಂಬವರಿಗೆ, ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು 24x7 ಕಾರ್ಯನಿರ್ವಾಹಕರಾದ ಇಕ್ಬಾಲ್ ಮೂಂಟುಗೋಳಿ ಇವರ ಕರೆಗೆ ಸ್ಪಂದಿಸಿ ಅಬು ಸ್ವಾಲಿ, ನಾಸಿರ್, ಸಿದ್ದೀಕ್, ಸಿರಾಜ್, ಆರಿಫ್ ಎಂಬವರು ರಕ್ತದಾನ ಮಾಡಿ ಜೀವ ಉಳಿಸಿದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಮಾನವೀಯತೆ ಮೆರೆದ ಯುವಕರಿಗೆ ತುಂಬು ಹೃದಯದ ಧನ್ಯವಾದಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ರೋಗಿಯ ಪಾಲಿಗೆ ಆಶಾಕಿರಣರಾದ ಅವಿನ್ ಮಂಡೆಕೋಲು..!

ಜುಲೈ 23 :-ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀನಿವಾಸ ಕಿಣಿ ಎಂಬವರಿಗೆ ತುರ್ತಾಗಿ A ಪಾಸಿಟಿವ್ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ರಕ್ತದಾನಿಗಳಿಗೆ ಸದಾ ಪ್ರೇರಣೆಯಾಗಿರುವ ಉತ್ತೇಜಕ ಲಿತಿನ್ ಕಂದಡ್ಕ ಅವರ ವಿಶೇಷ ಮುತುವರ್ಜಿಯಲ್ಲಿ ನಿರಂತರ ರಕ್ತದಾನಿ ಅವಿನ್ ಮಂಡೆಕೋಲು ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು. ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ… ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ.)

ರೋಗಿಯ ಪಾಲಿಗೆ ಆಶಾಕಿರಣರಾದ ರಕ್ತದಾನಿ ಗೆಳೆಯರ ಬಳಗ ಪುತ್ತೂರು ಇದರ ಸದಸ್ಯರಾದ ಲತೀಫ್ ಬಲ್ನಾಡ್ ..!

ಜುಲೈ 23 :-ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಗೀರಥಿ ಎಂಬವರಿಗೆ ತುರ್ತಾಗಿ A ಪಾಸಿಟಿವ್ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ರಕ್ತದಾನಿ ಗೆಳೆಯರ ಬಳಗ ಪುತ್ತೂರು ಇದರ ಉಸ್ತುವಾರಿಯಾದ ನವಾಝ್ ಬಲ್ನಾಡ್ ಅವರ ವಿಶೇಷ ಮುತುವರ್ಜಿಯಲ್ಲಿ ಇದರ ಸದಸ್ಯ ಲತೀಫ್ ಬಲ್ನಾಡ್ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು. ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ… ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ.)

ರೋಗಿಯ ಜೀವ ಉಳಿಸಲು ದೂರದ ಬೆಳ್ತಂಗಡಿಯಿಂದ ಮಂಗಳೂರಿಗೆ ತೆರಳಿ ರಕ್ತದಾನ ಮಾಡಿದ ನಿರಂತರ ರಕ್ತದಾನಿ ಮಾನವೀಯ ವ್ಯಕ್ತಿ ನಿಝಾಂ ಬೆಳ್ತಂಗಡಿ

ಜುಲೈ 23 :- ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲು ಎಂಬವರಿಗೆ ತುರ್ತಾಗಿ AB+ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಒಂದೂವರೆ ತಾಸುಗಳ ಪ್ರಯಾಣವನ್ನು ಲೆಕ್ಕಿಸದೆ ಕೆಲಸದ ಮಧ್ಯೆಯೂ ಬೆಳ್ತಂಗಡಿಯಿಂದ ಕೆ.ಎಂ.ಸಿ ಯ ರಕ್ತನಿಧಿಗೆ ತೆರಳಿ ನಿಝಾಂ ಬೆಳ್ತಂಗಡಿ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು. ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ… ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ.)

ಕೋವಿಡ್ ಸಂದಿಗ್ಧ ವೇಳೆಯಲ್ಲೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ಆಪತ್ಬಾಂಧವ ಯುವಕರು.!

ಜುಲೈ 22:- ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಶಾಂತ್ ಎಂಬವರಿಗೆ ತುರ್ತಾಗಿ O ನೆಗೆಟಿವ್ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಸ್ಮೈಲ್ ಫೌಂಡೇಶನ್ ಕುಳಾಯಿ ಸದಸ್ಯರಾದ ಸವಾದ್ ಕುಳಾಯಿ ಹಾಗೂ ಬಿಡಿಎಂ 24x7 ಕಾರ್ಯನಿರ್ವಾಹಕರಾದ ತಾಜ್ ಮಣಿಪಾಲ್ ಅವರ ವಿಶೇಷ ಮುತುವರ್ಜಿಯಲ್ಲಿ ಅವಿಭಜಿತ ಜಿಲ್ಲೆಯ ನಿಸ್ವಾರ್ಥ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ಸಂಪೂರ್ಣ ಸಹಕಾರದೊಂದಿಗೆ ಸುಜಯ್ ಕೋಟ್ಯಾನ್ ಮಲ್ಪೆ ಮತ್ತು ಅಫ್ವಾನ್ ಶೇಖ್ ಮಣಿಪಾಲ್ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು. ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ… ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ.)

ರೋಗಿಯ ಪಾಲಿಗೆ ಆಶಾಕಿರಣರಾದ ಸಮಾಜಸ್ನೇಹಿ ಯುವಕ ನಿಹಾಲ್ ಕುದ್ರೋಳಿ ಹಾಗು ಅನಿಲ್ ದೆರೆಬೈಲ್

ಜುಲೈ 20 :- ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಸ್ಮಾಯಿಲ್ ಎಂಬ ರೋಗಿಗೆ ತುರ್ತಾಗಿ AB ನೆಗೆಟಿವ್ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ತಕ್ಷಣ ಸ್ಪಂದಿಸಿದ ಸಮಾಜಸ್ನೇಹಿ ಆಪತ್ಬಾಂಧವ ಯುವಕರಾದ ನಿಹಾಲ್ ಕುದ್ರೋಳಿ ಹಾಗು ಅನಿಲ್ ದೆರೆಬೈಲ್ ಅವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ …ನಿರ್ಲಕ್ಷ್ಯವೂ ಕೂಡ ಬೇಡ ,ಜಾಗರೂಕರಾಗಿರಿ….! ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಕೋವಿಡ್ ಸಂದಿಗ್ಧ ವೇಳೆಯಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಕ.ರ.ವೇ ಕನ್ನಡಿಗರ ಘರ್ಜನೆ (ರಿ) ಇದರ ಕಾರ್ಯಕರ್ತರು..!

ಜುಲೈ 20 :- ಬೆಂಗಳೂರಿನ ಹೆಚ್.ಎಸ್.ಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಪಾಲ್ ಕೆ.ಎಸ್ ಗಾರ್ಡನ್ ಎಂಬವರಿಗೆ ತುರ್ತಾಗಿ ಯಾವುದೇ ಗುಂಪಿನ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಕ.ರ.ವೇ ವೀರ ಕನ್ನಡಿಗರ ಘರ್ಜನೆ (ರಿ.) ಇದರ ಸ್ಥಾಪಕಾಧ್ಯಕ್ಷರಾದ ನಿರಂತರವಾಗಿ ಸಾಮಾಜಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆಂಗಳೂರಿನ ಆಪತ್ಬಾಂಧವ ,ಕೊರೋನಾ ವಾರಿಯರ್ ಮಂಜುನಾಥ್ ಬೆಂಗಳೂರು ಹಾಗೂ ರಾಜ್ಯಾಧ್ಯಕ್ಷರಾದ ಗಣೇಶ್ ಜೊತೆಗೆ ಕಾರ್ಯಕರ್ತರಾದ ನವನೀತ್ ,ಶ್ರೀನಿವಾಸ್ ಹಾಗೂ ಕಿರಣ್ ಬೆಂಗಳೂರು ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು. ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ವೇಳೆ ಹದಗೆಟ್ಟಿರುವ ಬೆಂಗಳೂರಿನ ಜನತೆಯ ಅರೋಗ್ಯ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ… ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ.)

ಆತ್ಮೀಯ ಗೆಳೆಯನ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಮಾಡಿ ಮಾನವೀಯತೆಯ ಪ್ರತಿರೂಪ ತೋರಿ ಹುಟ್ಟು ಹಬ್ಬ ಸಂಭ್ರಮಾಚರಿಸಿದ ಜೀವದ ಗೆಳೆಯರು..!

ಜುಲೈ 20 ಸೋಮವಾರ ಮಂಗಳೂರು ತನ್ನ ಗೆಳೆಯನ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡಿ ಮಾದರಿಯಾಗಬೇಕೆಂದು ಮನದಲ್ಲಿ ನೆನೆದು, ಆಸ್ಪತ್ರೆಗೆ ಭೇಟಿ ನೀಡಿದಾಗ, ಅಚಾನಕ್ ಮಹಿಳೆಯೊಬ್ಬರು ರಕ್ತದ ಅವಶ್ಯಕತೆಗೆ ಕೇಳಿಕೊಂಡಾಗ ಮನದಲ್ಲಿ ಸಂತೋಷ ಇನ್ನೂ ಹೆಚ್ಚಾಯಿತು. ಹೌದು ಇದು ನಡೆದದ್ದು ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ. ಕನಚೂರು ಆಸ್ಪತ್ರೆಯಲ್ಲಿ ಗರ್ಭಿಣಿ ಖತೀಜಾ ಎಂಬ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು 2 ಯುನಿಟ್ ರಕ್ತದ ಅವಶ್ಯಕತೆಯಿತ್ತು. ರಕ್ತದಾನಿಗಳಿಗೆ ತಡಕಾಡುತ್ತಿದ್ದ ಮಹಿಳೆ ನೇರವಾಗಿ ಮುಬಾರಕ್ ಬಳಿಬಂದು ರಕ್ತದ ಅವಶ್ಯಕತೆಯ ಬೇಡಿಕೆಯಿಟ್ಟರು. ನಾನು ರಕ್ತದಾನ ಮಾಡಲೇ ಬಂದವನಾಗಿದ್ದೇನೆ… ಆದರೆ ನಿಮಗೆ ಇನ್ನೊಂದು ಯುನಿಟ್ ರಕ್ತ ಅವಶ್ಯಕತೆ ಇದೆ ಅಲ್ಲವೇ…? ಕೂಡಲೇ ಫೋನ್ ಕೈಗೆತ್ತಿಕೊಂಡ ಮುಬಾರಕ್ ತನ್ನ ಆತ್ಮೀಯ ಗೆಳೆಯ ಸಿದ್ದಿಕ್ ಗೆ ಕರೆ ಮಾಡಿ ರಕ್ತದಾನ ಮಾಡಲು ಕೇಳಿಕೊಂಡರು. ತುರ್ತಾಗಿ ಆಗಮಿಸಿದ ಸಿದ್ದಿಕ್ ಇವರ ಜೊತೆಗೂಡಿ ಮುಬಾರಕ್ ರಕ್ತದಾನ ಮಾಡುವುದರ ಮೂಲಕ ತನ್ನ ಗೆಳೆಯನ ಹುಟ್ಟು ಹಬ್ಬ ಆಚರಿಸಿ ಮಾದರಿಯಾದರು. ಇನ್ನೊಬ್ಬರ ಜೀವ ಉಳಿಸಲು ತಾವು ಮಾಡಿದ ಸೇವೆ ಅತ್ಯುತ್ತಮ. ನಿಮ್ಮ ಈ ಸೇವೆಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ಅಭಿನಂದನೆಗಳನ್ನು ಮತ್ತು ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು ಸಲ್ಲಿಸುತ್ತಿದೆ. ಮಾಧ್ಯಮ ವಿಭಾಗ: ಬ್ಲಡ್ ಡೋನರ್ಸ್ ಮಂಗಳೂರು(ರಿ)

ಭಾರತ ಪಾಕ್ ಗಡಿ ವೈರತ್ವಕ್ಕೆ ಮಾನವೀಯತೆ ಅಡ್ಡಿಯಾಗಲಾರದು ಎಂಬ ಸಂದೇಶ ಸಾರಿದ ರಕ್ತದಾನಕ್ಕೆ ಸಾಕ್ಷಿಯಾದ ಬ್ಲಡ್ ಡೋನರ್ಸ್ ಮಂಗಳೂರು (ರಿ)ಸಂಸ್ಥೆ

ಜುಲೈ 19 ಅಲ್ ಮನಾ ಆಸ್ಪತ್ರೆ ದಮ್ಮಾಮಿನಲ್ಲಿ ಭಾರತದ ಅನೀಸಾ ಆಮೀನಾ ಎಂಬವರಿಗೆ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂಧಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇದರ 24×7 ಕಾರ್ಯನಿರ್ವಾಹಕರಾದ ಸೈಫುದ್ದೀನ್ ಮಂಜೇಶ್ವರ ಹಾಗೂ ಫರ್ಝಾನ್ ಸಿದ್ದಕಟ್ಟೆ ಇವರ ಮುತುವರ್ಜಿಯಲ್ಲಿ ಪಾಕಿಸ್ತಾನದ ಪ್ರಜೆ ತೌಖೀರ್ ಮಲಿಕ್ ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದರು. ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ರಕ್ತದಾನ ಯಾರು ಮಾಡಬಹುದು ಅದರಿಂದ ಆಗುವ ಪ್ರಯೋಜನವೇನು....

ಸಾಮಾನ್ಯವಾಗಿ ರಕ್ತದಾನ ಮಾಡಲು ಸಾಕಷ್ಟು ಮಂದಿ ಮುಂದೆ ಬಂದರೂ, ಕೆಲವರಲ್ಲಿ ಇನ್ನೂ ಏನೋ ಅಳುಕಿದೆ. ರಕ್ತದಾನ ಮಾಡಿದರೆ ವೀಕ್ ಆಗುತ್ತೇವೆ, ಸುಸ್ತಾಗುತ್ತದೆ, ನಾನಾ ಸಮಸ್ಯೆಗಳು ಬರುತ್ತವೆ ಎಂಬ ಅಭಿಪ್ರಾಯ ಇನ್ನೂ ಕೆಲವರಲ್ಲಿದೆ. ಆದರೆ ರಕ್ತದಾನ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಒಳಿತೇ ಆಗುತ್ತದೆ. ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ಈಗ ನೋಡೋಣ. ರಕ್ತದಾನದಿಂದ ಕೇವಲ ರಕ್ತ ಪಡೆದುಕೊಂಡವರಿಗೆ ಮಾತ್ರವಲ್ಲದೇ, ರಕ್ತದಾನ ಮಾಡಿದವರಿಗೂ ಕೂಡ ಅನುಕೂಲವಾಗುವುದು. ಗಾಯ ಬೇಗ ವಾಸಿಯಾಗಲು ಹಾಗೂ ಹಸಿವೆಯನ್ನು ಹೆಚ್ಚಿಸಲು ರಕ್ತದ ಪ್ರಮಾಣ ತುಂಬಾ ಅವಶ್ಯಕ. ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದ ಕಬ್ಬಿಣಾಂಶ ಸಮತೋಲನದಲ್ಲಿರುತ್ತದೆ ಹಾಗೂ ಹೃದಯಾಘಾತ ತಪ್ಪಿಸಬಹುದು. ರಕ್ತದಾನದ ಮಾಡುವುದರಿಂದ ವಿವಿಧ ರೀತಿಯ ಕ್ಯಾನ್ಸರ್‌ ನಿಂದ ದೂರ ಉಳಿಯಬಹುದು. ರಕ್ತದಾನವು ದೇಹದಲ್ಲಿ ಕೊಲೆಸ್ಟಿರಾಲ್‌ ಪ್ರಮಾಣವನ್ನು ಕಡಿಮೆಮಾಡುತ್ತದೆ ಹಾಗೂ ರಕ್ತದೊತ್ತಡವನ್ನು(BP) ಹತೋಟಿಯಲ್ಲಿಡುತ್ತದೆ. ರಕ್ತದಾನ ಮಾಡುವುದರಿಂದ ಕೇವಲ ರಕ್ತ ಅವಶ್ಯವಿರುವವರ ಜೀವ ಉಳಿಸುವುದು ಮಾತ್ರವಲ್ಲದೇ, ರಕ್ತ ಕೊಡುವವರಿಗೂ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಸಹಾಯಕ. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)