ಜುಲೈ 31 ಶುಕ್ರವಾರ:ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಇಂದು ವಿಶ್ವದಾದ್ಯಂತ ಕೊರೋನ ಮಾರಕ ರೋಗದ ನಡುವೆಯೂ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಹಲವು ದಿನಗಳ ಬಳಿಕ ಮಸೀದಿಯಲ್ಲಿ ಈದ್ ನಮಾಜನ್ನು ಸರಕಾರದ ನೀತಿ ನಿಯಮಗಳನ್ನು ಅನುಸರಿಸುವ ಮೂಲಕ ಮುಸ್ಲಿಮರು ಮಾರಕ ರೋಗದ ನಿರ್ಮೂಲನೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು
ಬಕ್ರೀದ್ ಹಬ್ಬದ ಹಿನ್ನೆಲೆ: ಮುಸ್ಲಿಂ ಧರ್ಮೀಯರ ಪ್ರವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವೆಂದು ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಾರೆ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.
ಒಂದು ದಿನ ಪ್ರೀತಿಯ ಮಗನನ್ನು ಬಲಿ ಅರ್ಪಿಸು' ಎಂಬ ಸ್ವಪ್ನಾಜ್ಞೆಯು ಪ್ರವಾದಿ ಇಬ್ರಾಹಿಂ ಅವರಿಗೆ ಸಿಕ್ಕಿತ್ತು. ಹೀಗಾಗಿ, ದೇವಾಜ್ಞೆಯನ್ನು ಪಾಲಿಸಬೇಕೆಂದು ಇಬ್ರಾಹಿಂ ನಿರ್ಧರಿಸಿದ್ದರು. ಅದರಂತೆಯೇ ತನ್ನ ಪ್ರೀತಿಯ ಪುತ್ರ ಇಸ್ಮಾಯಿಲ್ರನ್ನು ಬಲಿ ಕೊಡಲು ಇವರು ಸಿದ್ಧರಾಗಿದ್ದರು. ಆದರೆ, ಇನ್ನೇನು ಬಲಿ ಅರ್ಪಿಸಬೇಕು ಎನ್ನುವಷ್ಟರಲ್ಲಿ ನಮ್ಮ ಆಜ್ಞೆಯನ್ನು ನೀನು ಪಾಲಿಸಿರುವೆ. ಹೀಗಾಗಿ, ನಿನ್ನ ಮಗನ ಬದಲು ಟಗರನ್ನು ಬಲಿ ಅರ್ಪಿಸು' ಎಂದು ಸಂತುಷ್ಟರಾದ ದೇವರಿಂದ ಆಜ್ಞೆಯನ್ನು ಪಾಲಿಸಿ. ದೇವಾಜ್ಞೆಯಂತೆ ಮಗನನ್ನೇ ಬಲಿಕೊಡಲು ಸಜ್ಜಾಗಿದ್ದ ಅನನ್ಯ ಭಕ್ತಿಯ ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ನೆನಪಾಗಿ ಬಕ್ರೀದ್ ಹಬ್ಬವನ್ನು ವಿಶ್ವಾದಾದ್ಯಂತ ಮುಸ್ಲಿಮರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
ಮಾಧ್ಯಮ ವಿಭಾಗ:ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment