ಆತ್ಮೀಯ ಗೆಳೆಯನ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಮಾಡಿ ಮಾನವೀಯತೆಯ ಪ್ರತಿರೂಪ ತೋರಿ ಹುಟ್ಟು ಹಬ್ಬ ಸಂಭ್ರಮಾಚರಿಸಿದ ಜೀವದ ಗೆಳೆಯರು..!
ಜುಲೈ 20 ಸೋಮವಾರ ಮಂಗಳೂರು
ತನ್ನ ಗೆಳೆಯನ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡಿ ಮಾದರಿಯಾಗಬೇಕೆಂದು ಮನದಲ್ಲಿ ನೆನೆದು, ಆಸ್ಪತ್ರೆಗೆ ಭೇಟಿ ನೀಡಿದಾಗ, ಅಚಾನಕ್ ಮಹಿಳೆಯೊಬ್ಬರು ರಕ್ತದ ಅವಶ್ಯಕತೆಗೆ ಕೇಳಿಕೊಂಡಾಗ ಮನದಲ್ಲಿ ಸಂತೋಷ ಇನ್ನೂ ಹೆಚ್ಚಾಯಿತು. ಹೌದು ಇದು ನಡೆದದ್ದು ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ.
ಕನಚೂರು ಆಸ್ಪತ್ರೆಯಲ್ಲಿ ಗರ್ಭಿಣಿ ಖತೀಜಾ ಎಂಬ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು 2 ಯುನಿಟ್ ರಕ್ತದ ಅವಶ್ಯಕತೆಯಿತ್ತು. ರಕ್ತದಾನಿಗಳಿಗೆ ತಡಕಾಡುತ್ತಿದ್ದ ಮಹಿಳೆ ನೇರವಾಗಿ ಮುಬಾರಕ್ ಬಳಿಬಂದು ರಕ್ತದ ಅವಶ್ಯಕತೆಯ ಬೇಡಿಕೆಯಿಟ್ಟರು.
ನಾನು ರಕ್ತದಾನ ಮಾಡಲೇ ಬಂದವನಾಗಿದ್ದೇನೆ… ಆದರೆ ನಿಮಗೆ ಇನ್ನೊಂದು ಯುನಿಟ್ ರಕ್ತ ಅವಶ್ಯಕತೆ ಇದೆ ಅಲ್ಲವೇ…?
ಕೂಡಲೇ ಫೋನ್ ಕೈಗೆತ್ತಿಕೊಂಡ ಮುಬಾರಕ್ ತನ್ನ ಆತ್ಮೀಯ ಗೆಳೆಯ ಸಿದ್ದಿಕ್ ಗೆ ಕರೆ ಮಾಡಿ ರಕ್ತದಾನ ಮಾಡಲು ಕೇಳಿಕೊಂಡರು.
ತುರ್ತಾಗಿ ಆಗಮಿಸಿದ ಸಿದ್ದಿಕ್ ಇವರ ಜೊತೆಗೂಡಿ ಮುಬಾರಕ್ ರಕ್ತದಾನ ಮಾಡುವುದರ ಮೂಲಕ ತನ್ನ ಗೆಳೆಯನ ಹುಟ್ಟು ಹಬ್ಬ ಆಚರಿಸಿ ಮಾದರಿಯಾದರು.
ಇನ್ನೊಬ್ಬರ ಜೀವ ಉಳಿಸಲು ತಾವು ಮಾಡಿದ ಸೇವೆ ಅತ್ಯುತ್ತಮ.
ನಿಮ್ಮ ಈ ಸೇವೆಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ಅಭಿನಂದನೆಗಳನ್ನು ಮತ್ತು ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು ಸಲ್ಲಿಸುತ್ತಿದೆ.
ಮಾಧ್ಯಮ ವಿಭಾಗ: ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment