ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ದಿನದಂದು ರಕ್ತದಾನ ಮಾಡಿದ ಅನಿವಾಸಿ ಭಾರತೀಯರು : ಬಹ್ರೈನ್ ಮಣ್ಣಿನಲ್ಲಿ 120 ಯುನಿಟ್ ರಕ್ತ ಸಂಗ್ರಹದೊಂದಿಗೆ ದಾಖಲೆ
ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ - ರಿ, ಬ್ಲಡ್ ಡೋನರ್ಸ್ ಮಂಗಳೂರು - ರಿ ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ / ಬಹ್ರೈನ್ ಇವರ ಸಹಯೋಗದೊಂದಿಗೆ ಜುಲೈ 31 ಶುಕ್ರವಾರ ಈದ್ ಹಬ್ಬದ ದಿನದಂದು ಬೆಳಿಗ್ಗೆ 7 :30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ "ಸಲ್ಮಾನಿಯಾ ರಕ್ತ ನಿಧಿ ಕೇಂದ್ರದಲ್ಲಿ" "ಬೃಹತ್ ರಕ್ತದಾನ ಶಿಬಿರ " ಜರುಗಿತು.
ಕೋವಿಡ್ 19, ಕೊರೋನಾದ ಈ ಒಂದು ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ದೇಶ-ವಿದೇಶದ ರೋಗಿಗಳಿಗೆ ರಕ್ತದ ಅವಶ್ಯಕತೆಯಿದ್ದು, ಈ ಒಂದು ಶಿಬಿರದ ಆ ಯೋಜನೆಯ ಮೂಲಕ ರಕ್ತ ಪೋರೈಕೆಯ ಮೂಲ ಉದ್ದೇಶವಾಗಿತ್ತು.
ಕಾರ್ಯಕ್ರಮ ಆಯೋಜಕರ ಕರೆಗೆ ಓಗೊಟ್ಟು ಬಹ್ರೈನ್ ಆನಿವಾಸಿ ನಿವಾಸಿಗಳು ಉತ್ತಮ ಸ್ಪಂದನೆ ನೀಡಿ ಸುಮಾರು 120 ಜನರು ರಕ್ತದಾನ ಮಾಡಿದರು.
ಈ ಮೂಲಕ ಭಾರತೀಯ ಮೂಲದ ಸಂಘಟನೆ ಹೊಸ ದಾಖಲೆ ಸೃಷ್ಟಿಸಿತು.
ವಿಶೇಷ: ಪ್ಲಾಸ್ಮ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ ಕಾಣುತ್ತಿದೆ.ಪ್ರಸ್ತುತ ಲಸಿಕೆ ಮತ್ತು ಔಷಧಿಯೇ ಇಲ್ಲದ ಮಾರಕ ಕೊರೋನಾ ವೈರಸ್ ಗೆ ಈ ವರೆಗೂ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಲಸಿಕೆ ಮತ್ತು ಔಷಧಿ ಇಲ್ಲದೆ ರೋಗಿಗಳಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಗೊಂದಲ ವೈದ್ಯರಲ್ಲಿದೆ.ಈ ಸಂಧರ್ಭದಲ್ಲಿ 12 ಮಂದಿ ಕೋವಿಡ್ 19 ಗುಣಮುಖ ರಕ್ತದಾನಿಗಳು ತಮ್ಮ ಶರೀರದಲ್ಲಿದ್ದ ಪ್ಲಾಸ್ಮ ರಕ್ತ ಕಣವನ್ನು ದಾನ ಮಾಡಿದರು.
ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ - ರಿ, ಬ್ಲಡ್ ಡೋನರ್ಸ್ ಮಂಗಳೂರು - ರಿ ಇದರ ಕಾರ್ಯ ನಿರ್ವಾಹಕರು ಮತ್ತು ಸದಸ್ಯರು ಸಹಕರಿಸಿದರು.
ಮಾಧ್ಯಮ ವಿಭಾಗ: ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment