ರೋಗಿಯ ಜೀವ ಉಳಿಸಲು ದೂರದ ಬೆಳ್ತಂಗಡಿಯಿಂದ ಮಂಗಳೂರಿಗೆ ತೆರಳಿ ರಕ್ತದಾನ ಮಾಡಿದ ನಿರಂತರ ರಕ್ತದಾನಿ ಮಾನವೀಯ ವ್ಯಕ್ತಿ ನಿಝಾಂ ಬೆಳ್ತಂಗಡಿ
ಜುಲೈ 23 :- ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲು ಎಂಬವರಿಗೆ ತುರ್ತಾಗಿ AB+ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಒಂದೂವರೆ ತಾಸುಗಳ ಪ್ರಯಾಣವನ್ನು ಲೆಕ್ಕಿಸದೆ ಕೆಲಸದ ಮಧ್ಯೆಯೂ ಬೆಳ್ತಂಗಡಿಯಿಂದ ಕೆ.ಎಂ.ಸಿ ಯ ರಕ್ತನಿಧಿಗೆ ತೆರಳಿ ನಿಝಾಂ ಬೆಳ್ತಂಗಡಿ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ…
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ.)
Comments
Post a Comment