ಜುಲೈ 22:- ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಶಾಂತ್ ಎಂಬವರಿಗೆ ತುರ್ತಾಗಿ O ನೆಗೆಟಿವ್ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಸ್ಮೈಲ್ ಫೌಂಡೇಶನ್ ಕುಳಾಯಿ ಸದಸ್ಯರಾದ ಸವಾದ್ ಕುಳಾಯಿ ಹಾಗೂ ಬಿಡಿಎಂ 24x7 ಕಾರ್ಯನಿರ್ವಾಹಕರಾದ ತಾಜ್ ಮಣಿಪಾಲ್ ಅವರ ವಿಶೇಷ ಮುತುವರ್ಜಿಯಲ್ಲಿ ಅವಿಭಜಿತ ಜಿಲ್ಲೆಯ ನಿಸ್ವಾರ್ಥ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ಸಂಪೂರ್ಣ ಸಹಕಾರದೊಂದಿಗೆ ಸುಜಯ್ ಕೋಟ್ಯಾನ್ ಮಲ್ಪೆ ಮತ್ತು ಅಫ್ವಾನ್ ಶೇಖ್ ಮಣಿಪಾಲ್ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ…
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ.)
Comments
Post a Comment