ಜುಲೈ 23 :-ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಗೀರಥಿ ಎಂಬವರಿಗೆ ತುರ್ತಾಗಿ A ಪಾಸಿಟಿವ್ ರಕ್ತ ಬೇಕಾಗಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ರಕ್ತದಾನಿ ಗೆಳೆಯರ ಬಳಗ ಪುತ್ತೂರು ಇದರ ಉಸ್ತುವಾರಿಯಾದ ನವಾಝ್ ಬಲ್ನಾಡ್ ಅವರ ವಿಶೇಷ ಮುತುವರ್ಜಿಯಲ್ಲಿ ಇದರ ಸದಸ್ಯ ಲತೀಫ್ ಬಲ್ನಾಡ್ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಒಂದು ಯೂನಿಟ್ ರಕ್ತಕ್ಕಾಗಿ ಹಪತಪಿಸುವ ಸಂದಿಗ್ಧ ಭೀತಿಯ ಮಧ್ಯೆಯೂ ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ,ನಿರ್ಲಕ್ಷ್ಯವೂ ಬೇಡ ಜಾಗರೂಕರಾಗಿರಿ…
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ.)
Comments
Post a Comment