Skip to main content

ಸ್ವಾತಂತ್ರ್ಯ ದಿನಾಚರಣೆಯ ಪ್ರಯಕ್ತ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ


ದೇರಳಕಟ್ಟೆ: 18 ಆಗಸ್ಟ್
74ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅರ್ಡೆಂಟ್ ರೈಡರ್ಸ್ ಕ್ಲಬ್ ಕರ್ನಾಟಕ, ಡ್ರೀಮ್ ರೈಡರ್ ಬೈಕರ್ಸ್ ಕ್ಲಬ್ ಮತ್ತು ಸಹರಾ ಸ್ಪೋರ್ಟ್ಸ್ ದೇರಳಕಟ್ಟೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಸಹಕಾರದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ದೇರಳಕಟ್ಟೆ ಕಚೇರಿಯಲ್ಲಿ ನಡೆಯಿತು.









ಕಾರ್ಯಕ್ರಮದಲ್ಲಿ 41 ರಕ್ತದಾನಿಗಳು ಸ್ವಯಂ ರಕ್ತದಾನ ಮಾಡಿದರು.ರಕ್ತದಾನ ಮಾಡಿದ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.









ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ವಹಿಸಿದರು. ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲು ಸಹಕರಿಸಿದ ಅರ್ಡೆಂಟ್ ರೈಡರ್ಸ್ ಕ್ಲಬ್ ಕರ್ನಾಟಕ, ಡ್ರೀಮ್ ರೈಡರ್ ಬೈಕರ್ಸ್ ಕ್ಲಬ್ ಮತ್ತು ಸಹರಾ ಸ್ಪೋರ್ಟ್ಸ್ ದೇರಳಕಟ್ಟೆ ಸಂಸ್ಥೆಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

















ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ರಾಜಕೀಯ ನೇತಾರರಾದ ಪ್ರಶಾಂತ್ ಕಾಜವ,ಚಂದ್ರಹಾಸ್ ಕರ್ಕೇರ,ಸಿ.ಎಂ.ರೌಫ್,ಎನ್. ಎಸ್ ಕರೀಮ್, ನಾಸೀರ್ ನಡುಪದವು,ಜಲೀಲ್ ಮೊಂಟುಗೋಳಿ,ಬ್ಲಡ್ ಡೋನರ್ಸ್ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ,
ಕಾರ್ಯನಿರ್ವಾಹಕರದ ಮುನೀರ್ ಚೆಂಬುಗುಡ್ಡೆ,ಬಿಡಿಎಂ 24×7 ಕಾರ್ಯನಿರ್ವಾಹಕರಾದ ಮನ್ಸೂರ್(ಮಂಚು) ಕೋಡಿಜಾಲ್,ತಾಜ್ ಮಂಜನಾಡಿ,ಸಹರಾ ಸ್ಪೋರ್ಟ್ಸ್ ಸದಸ್ಯರಾದ ಫೈಝಲ್ ದೇರಳಕಟ್ಟೆ,ಅಝ್ವಾನ್ ಮಂಜನಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವಾಝ್ ಕಲ್ಲರಕೋಡಿ ನಿರೂಪಿಸಿದರು.













ಮಾಧ್ಯಮ ವಿಭಾಗ:ಬ್ಲಡ್ ಡೋನರ್ಸ್ ಮಂಗಳೂರು(ರಿ)





ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)


Comments

Popular posts from this blog

ಸಹೋದರತೆ ಸಾರುವ ಈದ್ ಉಲ್ ಫಿತರ್ ಹಬ್ಬಕ್ಕೆ ಶುಭ ಸಂದೇಶ ಸಾರಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆ

ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...

ತುರ್ತು ರಕ್ತದಾನ ಮಾಡಿ ಜೀವದಾನಿಗಳಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರು …!

ಸೆಪ್ಟೆಂಬರ್ 03 :-ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಚೌಡೇಶ್  ದಾವಣಗೆರೆ ಎಂಬವರಿಗೆ ತುರ್ತಾಗಿ 2 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಕಾರ್ಯನಿರ್ವಾಹಕರಾದ  ಸಾಮಾಜಿಕ ಕಾರ್ಯಕರ್ತ * ಶಾಹುಲ್ ಹಮೀದ್ ಕಾಶಿಪಟ್ಣ ಹಾಗೂ ಜಮಾಲ್ ಕಲ್ಲಡ್ಕ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!

ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ * ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)