ಏಪ್ರಿಲ್ 19 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸಯ್ಯದ್ ಫಾತಿಮ ಝುಹುರ ಎಂಬವರಿಗೆ ತುರ್ತಾಗಿ A- ರಕ್ತದ ಅವಶ್ಯಕತೆ ಇದ್ದಾಗ ಲಾಕ್ ಡೌನ್ ಭೀತಿಯ ಮಧ್ಯೆಯೂ ಕ್ಲಪ್ತ ಸಮಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಕ್ರಿಯ ಸದಸ್ಯರಾದ ಅಶ್ರಫ್ ಎನ್ ಎಂ ಹಾಗೂ ನೌಶಾದ್ ಮಂಜವಾಡಿ ತುರ್ತಾಗಿ ರಕ್ತನಿಧಿಗೆ ಧಾವಿಸಿ ಜೀವದಾನಿಯಾದರು.
ಹಲವಾರು ಸಾಮಾಜಿಕ ಚಿಂತನೆಯಿಂದಲೇ ಮಂಜನಾಡಿ ಪರಿಸರದ ಆಪತ್ಬಾಂಧವರೆನಿಸಿಕೊಂಡಿರುವ ಈ ಈರ್ವರ ಮಾನವೀಯ ಮೌಲ್ಯಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ಮಾಧ್ಯಮ ವಿಭಾಗ ,
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment