ಎಪ್ರಿಲ್ 25 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಶಲ ಹಾಗೂ ಮರಿಯಮ್ಮ ಎಂಬ ಮಹಿಳಾ ರೋಗಿಗೆ ಅತೀ ವಿರಳವಾಗಿ ದೊರಕುವ ಓ ನೆಗೆಟಿವ್ ರಕ್ತದ ಅವಶ್ಯಕತೆಯಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸದಸ್ಯರಾದ ಸಿದ್ದೀಕ್ ಎಸ್ ಎಚ್ ಹಾಗೂ ಸಫ್ವಾನ್ ಕಲ್ಲರಕೋಡಿ ತುರ್ತಾಗಿ ರಕ್ತನಿಧಿಗೆ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಲಾಕ್ ಡೌನ್ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ,ರಮ್ಝಾನ್ ಉಪವಾಸದ ದಣಿವನ್ನು ಲೆಕ್ಕಿಸದೆ ಕ್ಲಪ್ತ ಸಮಯದಲ್ಲಿ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …
ಕೊರೋನಾ ಬಗ್ಗೆ ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment