ಎಪ್ರಿಲ್ 07:- ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಸೆಕುಂಞಿ ಎಂಬ ರೋಗಿಗೆ ತುರ್ತಾಗಿ ರಕ್ತದ ಅವಶ್ಯಕತೆಯಿದ್ದಾಗ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಾಮಾಜಿಕ ಕಳಕಳಿಯುಳ್ಳ ಯುವಕರಾದ ಶಬೀರ್ ಚೆಂಬುಗುಡ್ಡೆ ,ಶಬೀರ್ (ಚಬ್ಬಿ) ಚೆಂಬುಗುಡ್ಡೆ ,ಅಶ್ರಫ್ ದೇರಳಕಟ್ಟೆ ,ಅಶ್ರಫ್ ಮಂಜನಾಡಿ ಎಂಬವರು ತುರ್ತು ರಕ್ತದಾನ ಮಾಡಿ ಜೀವದಾನಿಗಳಾದರು.
ಮನೆಯಲ್ಲಿರಬೇಕಾದವರು ಇನ್ನೊಂದು ಜೀವವನ್ನು ಉಳಿಸುವ ಒಂದೇ ಒಂದು ಸದುದ್ದೇಶದಿಂದ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ತೆರಳಿ ಕ್ಲಪ್ತ ಸಮಯಕ್ಕೆ ಸ್ಪಂದಿಸಿದ ನಿಮಗೆಲ್ಲರಿಗೂ ಹೃದಯಾಂತರಾಳದ ಅಭಿನಂದನೆಗಳು..
ಸದೃಢ ಯುವ ಸಮಾಜಕ್ಕೆ ನೀವೇ ನಿಜವಾದ ಮಾದರಿ..ಹ್ಯಾಟ್ಸಾಫ್ ಬ್ರದರ್ಸ್
ನಾಲ್ಕು ರಕ್ತದಾನಿಗಳ ಪೈಕಿ ಎರಡೆರಡು ದಾನಿಗಳ ಹೆಸರುಗಳು ಪರಸ್ಪರ ಒಂದೇ ಆಗಿದ್ದು ಇಂದಿನ ವೈಶಿಷ್ಟ್ಯತೆ.
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment