ಏಪ್ರಿಲ್ 23 :- ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ಕೂಡ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಗದೇ ಇರುವುದರಿಂದ ರೋಗಿಗಳಿಗೆ ಅಗತ್ಯ ಸಂಧರ್ಭದಲ್ಲಿ ರಕ್ತದ ತೀರಾ ಅಭಾವವನ್ನು ಮನಗಂಡು ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ರಕ್ತನಿಧಿ ಅಧಿಕಾರಿಗಳು ನಮ್ಮ ಕಾರ್ಯನಿರ್ವಾಹಕರಾದ ಫಾರೂಕ್ ಬಿಗ್ ಗ್ಯಾರೇಜ್ ಇವರನ್ನು ಸಂಪರ್ಕಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾಗಿ ಅಬ್ರಾರ್,ರಿಝ್ವಾನ್,ಆಶಿಕ್ ಅಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವದಾನಿಗಳಾದರು.
ರಕ್ತದ ಅಭಾವ ಇರುವ ಈ ಸಮಯ ಸಂದರ್ಭವನ್ನು ಅರಿತು ಯುವಕರು ಇನ್ನೊಂದು ಜೀವಗಳನ್ನು ಹೇಗೆ ಉಳಿಸಬಹುದು ಎಂದು ಸಮಾಜಕ್ಕೆ ಉದಾತ್ತ ಸಂದೇಶವನ್ನು ಸಾರಿದ ಯುವಕರಿಗೆ ಹೃದಯಾಂತರಾಳದ ಅಭಿನಂದನೆಗಳು.
ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment