ಮಂಗಳೂರು ಏಪ್ರಿಲ್ 16 ಗುರುವಾರ
ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬರೀ ಒಂದು ದಿನ ಪೂರ್ತಿ ಗೊಂಡಿದ್ದ ಮಗುವಿನ ತುರ್ತು ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯನಿರ್ವಾಹಕರು, ಸಮಾಜಸೇವಕರು ಆದ ಸಲಾಂ ಚೆಂಬುಗುಡ್ಡೆ ಇವರು ನೇರ ರಕ್ತದಾನ ಮಾಡಿ ಮಗುವಿನ ಜೀವ ಉಳಿಸಿದರು.
ಈ ಮೊದಲು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟವರ ಕತ್ತರಿಸಿದ ಕಾಲನ್ನು ದಫನ ಮಾಡಿ ಜನರ ಮನಸ್ಸು ಗೆದ್ದಿದ್ದರು, ಮತ್ತು ಮಂಗಳೂರು ಪ್ರದೇಶದ ಹಾಗೂ ಸಮಾಜದ ಬಡ ರೋಗಿಗಳ ಮತ್ತು ಬಡ ಕುಟುಂಬಗಳ ಪಾಲಿಗೆ ಆಶಾಕಿರಣವಾಗಿದ್ದಾರೆ.
ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಹಲವು ರೋಗಿಗಳ ಜೀವ ಉಳಿಸುವಲ್ಲಿ ಕಾರಣಕರ್ತರಾಗುವ ಸಲಾಂ ಚೆಂಬುಗುಡ್ಡೆ ಇವರ ನಿಸ್ವಾರ್ಥ ಸೇವೆಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ಅಭಿನಂದನೆಗಳನ್ನು ಸಲ್ಲಿಸುತ್ತಿದೆ.
ಬ್ಲಡ್ ಡೋನರ್ಸ್ ಮಂಗಳೂರು - ರಿ
Comments
Post a Comment