ಏಪ್ರಿಲ್ 19 :- ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ಕೂಡ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಗದೇ ಇರುವುದರಿಂದ ರೋಗಿಗಳಿಗೆ ಅಗತ್ಯ ಸಂಧರ್ಭದಲ್ಲಿ ರಕ್ತದ ತೀರಾ ಅಭಾವವನ್ನು ಮನಗಂಡು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಜನಾಬ್ ನವಾಝ್ ಕಲ್ಲರಕೋಡಿ ಇವರ ಕರೆಗೆ ಸ್ಪಂದಿಸಿ ಫಯಾಝ್ ಮಂಜನಾಡಿ ,ನಾಸಿರ್ ಮಂಜನಾಡಿ ,ಆಶಿಕ್ ಮಂಜನಾಡಿ ,ಆಶಿರ್ ಮಂಜನಾಡಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವದಾನಿಗಳಾದರು.
ರಕ್ತದ ಅಭಾವ ಇರುವ ಈ ಸಮಯ ಸಂದರ್ಭವನ್ನು ಅರಿತು ಯುವಕರು ಇನ್ನೊಂದು ಜೀವಗಳನ್ನು ಹೇಗೆ ಉಳಿಸಬಹುದು ಎಂದು ಸಮಾಜಕ್ಕೆ ಉದಾತ್ತ ಸಂದೇಶವನ್ನು ಸಾರಿದ ಮಂಜನಾಡಿ ಪರಿಸರದ ಈ ನಾಲ್ವರಿಗೂ ನಮ್ಮ ಹೃದಯಾಂತರಾಳದ ಅಭಿನಂದನೆಗಳು.
ಪ್ರಕಟಣೆ:
ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಧ್ಯಮ ವಿಭಾಗ
Comments
Post a Comment