ಮಂಗಳೂರು:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಲ್ಲಿ ರಾಷ್ಟ್ರದವರೆಗೂ ತನ್ನ ನಿಸ್ವಾರ್ಥ ಸಾಮಾಜಿಕ ಕಳಕಳಿಯ ಕಾರ್ಯನಿರ್ವಾಹಕರ ಶಿಸ್ತುಬದ್ದವಾಗಿರುವ ತಂಡಕ್ಕೆ ನಿಮ್ಮದೊಂದು ಹಾರೈಕೆಯಿರಲಿ .
ಯಾವುದೇ ಪ್ರತಿಫಲಾಪೇಕ್ಷೆ ಬಯಸದ ನಲವತ್ತಕ್ಕಿಂತಲೂ ಅಧಿಕ ವಾಟ್ಸಾಪ್ ಗ್ರೂಪುಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡಿರುವ ಈ ಸಂಸ್ಥೆಯನ್ನು ಕಳೆದ 7 ವರ್ಷಗಳಿಂದ ಹರಸಿ ಹಾರೈಸಿದವರಿಗೂ ,ಕ್ಲಪ್ತ ಸಮಯದಲ್ಲಿ ನಮ್ಮ ಕರೆಗೆ ಸ್ಪಂಧಿಸಿದ ರಕ್ತದಾನಿಗಳಿಗೂ ,ಬ್ಲಡ್-ಫ್ಲಡ್-ಫುಡ್-ಮೆಡಿಕಲ್ ಹೀಗೇ ಸಂದರ್ಭಕ್ಕನುಸಾರವಾಗಿ ಜನರ ಮಧ್ಯೆ ಬೆರೆತು ಜನಸೇವಕರಾಗಲು ಅಣುವು ಮಾಡಿಕೊಟ್ಟ ಪ್ರತಿಯೊಬ್ಬ ಪ್ರೋತ್ಸಾಹಕರಿಗೂ ,ರಕ್ತ ನಿಧಿಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಗೂ ರಕ್ತದಾನ ಶಿಬಿರಗಳ ಆಯೋಜಕರುಗಳಿಗೂ ನಾವೆಂದೂ ಚಿರಋಣಿ ..
ದಿನದ 24 ತಾಸುಗಳಲ್ಲೂ ರಕ್ತದ ಬೇಡಿಕೆಗೆ ಸ್ಪಂದಿಸುತ್ತಾ ಕ್ಷಣ ಮಾತ್ರದಲ್ಲಿ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಈ ಸಂಸ್ಥೆಯ ಮೇಲೆ ತಮ್ಮೆಲ್ಲರ ಆಶೀರ್ವಾದ ಪ್ರಾರ್ಥನೆ ಸದಾ ಇರಲಿ …
ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವುದರೊಂದಿಗೆ ಅವರ ಜೀವನವನ್ನು ಬೆಳಗಿಸುವ ಮಹಾತ್ಕಾರ್ಯಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿ…
ವರದಿ :-
ಮಾಧ್ಯಮ ವಿಭಾಗ ,
ಬ್ಲಡ್ ಡೋನರ್ಸ್ ಮಂಗಳೂರು(ರಿ)

Comments
Post a Comment