ಏಪ್ರಿಲ್ 01 :- ಕೋವಿಡ್-19 ಲಾಕ್ ಡೌನ್ ಭೀತಿಯಲ್ಲಿ ದಿನಗೂಲಿ ನೌಕರರಿಗೆ ಹಾಗೂ ತೀರಾ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಅತೀವ ಅಭಾವ ಉಂಟಾದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯಲ್ಲಿ ಕೋವಿಡ್-19 ಹಲವು ಪ್ರಕರಣ ದೃಢೀಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಪ್ರವೇಶ ನಿರ್ಬಂಧವಾದ ಹಿನ್ನೆಲೆಯಲ್ಲಿ ಯಾವುದೇ ಸಂಘ ಸಂಸ್ಥೆಗಳು ಈ ಪರಿಸರಕ್ಕೆ ತುರ್ತಾಗಿ ಧಾವಿಸಲು ಸಾಧ್ಯವಾಗಲಿಲ್ಲ.
ಒಂದೊತ್ತಿನ ಊಟಕ್ಕೂ ತೀರಾ ಕಷ್ಟವಾಗಿರುವ ಆಯ್ದ 15 ಕುಟುಂಬಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ತುರ್ತಾಗಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರಾದ ಫಾರೂಕ್ ರೊಮ್ಯಾಂಟಿಕ್ ಆತೂರು ,ಇಮ್ರಾನ್ ಉಪ್ಪಿನಂಗಡಿ ,ರಝಾಕ್ ಸಾಲ್ಮರ ಹಾಗೂ ಸ್ಥಳೀಯರಾದ ಅಝೀಝ್ ಕಕ್ಕೆಪದವು ,ಇಸ್ಮಾಯಿಲ್ ಕಕ್ಕೆಪದವು ,ಹಾರಿಸ್ ಮಂಚು ಮತ್ತು ಹಮೀದ್ ಕಕ್ಕೆಪದವು ಉಪಸ್ಥಿತರಿದ್ದರು.
ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ. ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...
Comments
Post a Comment