ಲಾಕ್ ಡೌನ್ ಜಾರಿಯಲ್ಲಿದ್ದರೂ ಆಸ್ಪತ್ರೆಯಲ್ಲಿ ರಕ್ತದ ಅಭಾವವನ್ನರಿತು ಸ್ವಯಂ ರಕ್ತದಾನ ಮಾಡಿದ ಮಾಡೂರಿನ ಆಪತ್ಬಾಂಧವ ಯುವಕರು
ಏಪ್ರಿಲ್ 19 :- ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ಕೂಡ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಅನನೂಕೂಲವಾದ್ದರಿಂದ ರೋಗಿಗಳಿಗೆ ತುರ್ತಾಗಿ ಪೂರೈಸಲು ರಕ್ತದ ತೀರಾ ಅಭಾವವನ್ನು ಮನಗಂಡು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕೋಶಾಧಿಕಾರಿಗಳಾದ ಅಪ್ರತಿಮ ನಿಸ್ವಾರ್ಥ ಸಮಾಜ ಸೇವಕ ಜನಾಬ್ ಫಯಾಝ್ ಮಾಡೂರು ಸಹಿತ ಖ್ಯಾತ ಕ್ರಿಕೆಟ್ ಪಟು ಅಬ್ಬಾಸ್ ಎನ್ ಎಂ ,ಸಿಯಾಬ್ ಮಾಡೂರು ಹಾಗೂ ಮಹಮ್ಮದ್ ಫಯಾಝ್ ಎಂಬವರು ಯೇನಪೋಯ ದೇರಳಕಟ್ಟೆಯ ರಕ್ತನಿಧಿಗೆ ತೆರಳಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವದಾನಿಗಳಾದರು.
ರಕ್ತದ ಅಭಾವ ಇರುವ ಈ ಸಮಯ ಸಂದರ್ಭವನ್ನು ಅರಿತು ಯುವಕರು ಇನ್ನೊಂದು ಜೀವಗಳನ್ನು ಹೇಗೆ ಉಳಿಸಬಹುದು ಎಂದು ಸಮಾಜಕ್ಕೆ ಉದಾತ್ತ ಸಂದೇಶವನ್ನು ಸಾರಿದ ಮಾಡೂರು ಪರಿಸರದ ಈ ನಾಲ್ವರಿಗೂ ನಮ್ಮ ಹೃದಯಾಂತರಾಳದ ಅಭಿನಂದನೆಗಳು.
ಪ್ರಕಟಣೆ:
ಬ್ಲಡ್ ಡೋನರ್ಸ್ ಮಂಗಳೂರು(ರಿ)
ಮಾಧ್ಯಮ ವಿಭಾಗ
Comments
Post a Comment