Skip to main content

ಪುತ್ತೂರಿನಲ್ಲಿ ತುರ್ತು ಸಂದರ್ಭದಲ್ಲಿ ಜೀವದಾನಿಯಾದ ಫ್ರೆಂಡ್ಸ್ ಪುತ್ತೂರು ಸದಸ್ಯ ಸಮದ್ ಮೊಟ್ಟೆತ್ತಡ್ಕ





ಎಪ್ರಿಲ್ 20 :- ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಅಬ್ದುಲ್ ಅಝೀಝ್ ಆರ್ಲಪದವು ಎಂಬವರಿಗೆ ತುರ್ತಾಗಿ A ಪಾಸಿಟಿವ್ ರಕ್ತದ ಅವಶ್ಯಕತೆಯಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಸಕ್ರಿಯ ಸದಸ್ಯರಾಗಿರುವ ಇಮ್ತಿಯಾಝ್ ಫ್ರೆಂಡ್ಸ್ ಪುತ್ತೂರು ಅವರ ಕರೆಗೆ ಸ್ಪಂದಿಸಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮೊಟ್ಟೆತ್ತಡ್ಕ,ಪುತ್ತೂರು ಇದರ ಸದಸ್ಯರಾದ ಸಮದ್ ಮೊಟ್ಚೆತ್ತಡ್ಕ ಅವರು ತ್ವರಿತಗತಿಯಲ್ಲಿ ಪುತ್ತೂರು ರೋಟರಿ ಬ್ಲಡ್ ಬ್ಯಾಂಕಿಗೆ ತೆರಳಿ ರಕ್ತದಾನ ಮಾಡುವುದರೊಂದಿಗೆ ನೆರವಾದರು.




ಹಲವಾರು ಸಾಮಾಜಿಕ ಸೇವೆಯ ಹಾದಿಯಲ್ಲಿ ತನ್ನನ್ನು ಸಕ್ರಿಯಾಗಿ ತೊಡಗಿಸಿಕೊಂಡಿರುವ ಫ್ರೆಂಡ್ಸ್ ಪುತ್ತೂರು ಕೋವಿಡ್-19 ಸಂದ್ರಿಕ್ತ ಪರಿಸ್ಥಿತಿಯಲ್ಲಿ ಜನಸೇವೆಯಲ್ಲಿ ಸಕ್ರಿಯಾಗಿರುವ ಕ್ಲಬ್ ನ ಸದಸ್ಯರು ರಕ್ತದಾನಿಗಳಾಗಿ ನಿರಂತರ ಸಹಕರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ,ಇವರಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ..




ವರದಿ :- ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)


Comments

Post a Comment

Popular posts from this blog

ಸಹೋದರತೆ ಸಾರುವ ಈದ್ ಉಲ್ ಫಿತರ್ ಹಬ್ಬಕ್ಕೆ ಶುಭ ಸಂದೇಶ ಸಾರಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆ

ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...

ತುರ್ತು ರಕ್ತದಾನ ಮಾಡಿ ಜೀವದಾನಿಗಳಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರು …!

ಸೆಪ್ಟೆಂಬರ್ 03 :-ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಚೌಡೇಶ್  ದಾವಣಗೆರೆ ಎಂಬವರಿಗೆ ತುರ್ತಾಗಿ 2 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಕಾರ್ಯನಿರ್ವಾಹಕರಾದ  ಸಾಮಾಜಿಕ ಕಾರ್ಯಕರ್ತ * ಶಾಹುಲ್ ಹಮೀದ್ ಕಾಶಿಪಟ್ಣ ಹಾಗೂ ಜಮಾಲ್ ಕಲ್ಲಡ್ಕ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!

ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ * ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)