ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸಹಕಾರದಲ್ಲಿ ಅನಿವಾಸಿಗಳನ್ನು ಹೊತ್ತ 2ನೇ ಚಾರ್ಟಡ್ ವಿಮಾನ ದಮ್ಮಾಮ್ ನಿಂದ ಮಂಗಳೂರಿಗೆ
ದಮ್ಮಾಮ್ ಸೆಪ್ಟೆಂಬರ್ 12: ದಾದ ಬಾಯ್ ಟ್ರಾವೆಲ್ಸ್ ಇದರ 62ನೇ ಚಾರ್ಟರ್ ವಿಮಾನ ದಮ್ಮಾಮ್ ನಿಂದ ಮಂಗಳೂರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸಹಕಾರದೊಂದಿಗೆ 60 ಪ್ರಯಾಣಿಕರು ಸೇರಿ ಒಟ್ಟು 170 ಪ್ರಯಾಣಿಕರು ತಾಯ್ನಾಡಿಗೆ ಬೆಳಿಗ್ಗೆ 11 ಘಂಟೆಗೆ ಪ್ರಯಾಣ ಹೊರಟಿದೆ.
ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದ ಬ್ಲಡ್ ಡೋನರ್ಸ್ ಮಂಗಳೂರು ಸದ್ಯ ವಿದೇಶದಲ್ಲಿ ಬಾರೀ ಸದ್ದು ಮಾಡುತಿದ್ದು ಈ ಸಂಸ್ಥೆ ರಕ್ತದಾನ ಶಿಬಿರ ಹಾಗೂ ಅನಿವಾಸಿಗಳನ್ನು ಊರಿಗೆ ಕಳುಹಿಸುವ ಕೆಲಸವೂ ಸೇರಿ ಕರಾವಳಿಗರ ಮನೆ ಮಾತಾಗಿದೆ.
ಪ್ರಯಾಣಿಕರಿಗೆ ಪಿಪಿ ಕಿಟ್,ಹಾಗೂ ಅತ್ಯವಶ್ಯಕ ರಿಪ್ರೇಶಮೆಂಟ್ ಕಿಟ್ ನೊಂದಿಗೆ ದಮ್ಮಾಮ್ ವಿಮಾನ ನಿಲ್ದಾಣದಿಂದ BDM ಕಾರ್ಯನಿರ್ವಾಹಕರಾದ ಫರ್ಝಾನ್ ಸಿದ್ದಕಟ್ಟೆ,ಮುಝಮ್ಮಿಲ್, ಫಯಾಝ್, ನೌಫಲ್ ಬಜ್ಪೆ ಹಾಗೂ ಇಂಡಿಯನ್ ಸೋಷಿಯಲ್ ಫೋರಮ್ ನಾಯಕರಾದ ಅತಾವುಲ್ಲಾ, ಶರೀಫ್ ಜೊಕ್ಕಟ್ಟೆ ,ಶಬೀರ್ ಕೃಷ್ಣಾಪುರ, ಇಬ್ರಾಹಿಂ ವೇಣೂರು ಸಕಲ ವ್ಯವಸ್ಥೆ ಸಿದ್ದಪಡಿಸಿ ಪ್ರಯಾಣಿಕರನ್ನು ಬೀಳ್ಕೊಟ್ಟರು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಲು ಬಿಡಿಎಂ ಸಂಸ್ಥೆಯ ಸದಸ್ಯರು
ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ
ಮಾಧ್ಯಮ ವಿಭಾಗ: ಬ್ಲಡ್ ಡೋನರ್ಸ್ ಮಂಗಳೂರು(ರಿ)
Thank you for all
ReplyDeleteMashaa allah 🤩
ReplyDelete