Skip to main content

ಆಟೋ ರಾಜಾಕನ್ಮಾರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದೊಂದಿಗೆ ಮುಡಿಪುವಿನಲ್ಲಿ ಯಶಸ್ವಿಯಾಗಿ ನಡೆದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ 246 ನೇ ರಕ್ತದಾನ ಶಿಬಿರ


ಸೆ.13 :- ಆಟೋ ರಾಜಾಕನ್ಮಾರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ಸ್ ಕಂಕನಾಡಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಸೌಹಾರ್ದ ರಕ್ತದಾನ ಶಿಬಿರವು ಸಾಂಬಾರ್ ತೋಟ ಮದ್ರಸ ಹಾಲ್ ನಲ್ಲಿ ನಡೆಯಿತು.
ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಇವರು ದುವಾದೊಂದಿಗೆ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಂಬಾರ್ ತೋಟ ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ಅಹ್ಸನಿ ಅವರು ಮಾತನಾಡಿ ಜೀವಕ್ಕೆ ಜೀವ ನೀಡುವ ಯಾವುದೇ ವೈಜ್ಞಾನಿಕ ಸಂಶೋಧನೆಗಳಿಗೂ ಸರಿಸಾಟಿಯಾಗದ ರಕ್ತದಾನ ಪ್ರಕ್ರಿಯೆಯಲ್ಲಿ ರಕ್ತಕ್ಕೆ ಪರ್ಯಾಯವೊಂದಿದ್ದರೆ ಅದು ರಕ್ತ ಮಾತ್ರವಾಗಿದೆ ಎಂದರು.









ವೇದಿಕೆಯಲ್ಲಿ ಬ್ರೈಟ್ ಸಂಸ್ಥೆಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ,ಹಸನ್ ಹಾಜಿ ಸಾಂಬಾರ್ತೋಟ ,ಬ್ಲಡ್ ಡೋನರ್ಸ್ ಮಂಗಳೂರು (ರಿ) ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಮಂಜೇಶ್ವರ ,ಸಾಮಾಜಿಕ ಕಾರ್ಯಕರ್ತ ಜಲೀಲ್ ಆಲಂಪಾಡಿ ,ಶಾಹುಲ್ ಹಮೀದ್ ಹೆಚ್.ಬಿ.ಟಿ ಉಪಸ್ಥಿತರಿದ್ದರು.









ಸನ್ಮಾನ :- ಸಾಮಾಜಿಕ ರಂಗದಲ್ಲಿ ನಿಸ್ವಾರ್ಥವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಕ್ಕೆ ಭಾಜೀನರಾದ ಎಂ.ಎನ್.ಜಿ ಫೌಂಡೇಶನ್ ಸಂಸ್ಥಾಪಕರಾದ ಜನಾಬ್ ಇಲ್ಯಾಸ್ ಮಂಗಳೂರು ,ಮೈಮೂನ ಫೌಂಡೇಶನ್ ಸಂಸ್ಥಾಪಕರಾದ ಜನಾಬ್ ಆಸಿಫ್ ಆಪತ್ಬಾಂಧವ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಎಸ್.ಎಚ್ ಸಾಂಬಾರ್ ತೋಟ ಇವರನ್ನು ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.













ಬ್ಲಡ್ ಡೋನರ್ಸ್ ಮಂಗಳೂರು (ರಿ) ಮಹಿಳಾ ಘಟಕದ ಅಧ್ಯಕ್ಷೆ ಉಪನ್ಯಾಸಕಿ ಶ್ರೀಮತಿ ಆಯಿಷ್ ಯು.ಕೆ ಉಳ್ಳಾಲ ಇವರ ಚೊಚ್ಚಲ ಕವನ ಸಂಕಲನ ಗೋಡೆ ಕಟ್ಟುವವರು ಪುಸ್ತಕವನ್ನು ಬ್ಲಡ್ ಡೋನರ್ಸ್ ಮಂಗಳೂರು (ರಿ) ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಮಂಜೇಶ್ವರ ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.










ಈ ಸಂದರ್ಭದಲ್ಲಿ ಬಿಡಿಎಂ ಕಾರ್ಯ ನಿರ್ವಾಹಕರುಗಳಾದ ಫಯಾಝ್ ಮಾಡೂರು ,ಹಮೀದ್ ಪಜೀರ್ ,ಹನೀಫ್ ಮುಡಿಪು ,ಸಿರಾಜ್ ಪಜೀರ್ ಅದೇ ರೀತಿಯಾಗಿ ಸದಸ್ಯರುಗಳಾದ ಮನ್ಸೂರ್ ಕೋಡಿಜಾಲ್ ,ಇಸಾಕ್ ಬೋಳಿಯಾರ್ ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ಅವರು ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ಜಲೀಲ್ ಮುಡಿಪು ಸ್ವಾಗತಿಸಿ ವಂದಿಸಿದರು .

























ಮಾಧ್ಯಮ ವಿಭಾಗ: ಬ್ಲಡ್ ಡೋನರ್ಸ್ ಮಂಗಳೂರು(ರಿ)


Comments

Popular posts from this blog

ಸಹೋದರತೆ ಸಾರುವ ಈದ್ ಉಲ್ ಫಿತರ್ ಹಬ್ಬಕ್ಕೆ ಶುಭ ಸಂದೇಶ ಸಾರಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆ

ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...

ತುರ್ತು ರಕ್ತದಾನ ಮಾಡಿ ಜೀವದಾನಿಗಳಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರು …!

ಸೆಪ್ಟೆಂಬರ್ 03 :-ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಚೌಡೇಶ್  ದಾವಣಗೆರೆ ಎಂಬವರಿಗೆ ತುರ್ತಾಗಿ 2 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಕಾರ್ಯನಿರ್ವಾಹಕರಾದ  ಸಾಮಾಜಿಕ ಕಾರ್ಯಕರ್ತ * ಶಾಹುಲ್ ಹಮೀದ್ ಕಾಶಿಪಟ್ಣ ಹಾಗೂ ಜಮಾಲ್ ಕಲ್ಲಡ್ಕ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!

ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ * ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)