ಜೂನ್ ೦5 :- ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಯಿಷಾ ಎಂಬವರಿಗೆ ತುರ್ತಾಗಿ B- ಪ್ಲೇಟ್ಲೆಟ್ ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಖಲಂದರ್ ಬುಳೇರಿಕಟ್ಟೆ ಅವರ ವಿಶೇಷ ಮುತುವರ್ಜಿಯಲ್ಲಿ ಬುಳೇರಿಕಟ್ಟೆಯ ಸಮಾಜಸ್ನೇಹಿ ಅಶ್ರಫ್ ಪೈಸಾರಿ ಹಾಗೂ ರೊಮ್ಯಾಂಟಿಕ್ ಆತೂರು ಮತ್ತು ಬಿಡಿಎಂ ಸದಸ್ಯರಾದ ಖಲೀಲ್ ಆತೂರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment