Skip to main content

ಐ.ಎಸ್.ಎಫ್ ಕರ್ನಾಟಕ,ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಯೋಗದಲ್ಲಿ ಸೌದಿ ಅರೇಬಿಯಾದ ಹಫರ್ ಅಲ್ ಬತೀನ್ ನಲ್ಲಿ ಯಶಸ್ವಿ ಬೃಹತ್ ರಕ್ತದಾನ ಶಿಬಿರ


ಜೂನ್ 21 :- ಇಂಡಿಯನ್ ಸೋಷಿಯಲ್ ಫಾರಂ( ISF) ಕರ್ನಾಟಕ ,ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್, ಸೌದಿ ಅರೇಬಿಯಾ ಇವರ ಸಹಭಾಗಿತ್ವದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 242 ನೇ ಬೃಹತ್ ರಕ್ತದಾನ ಶಿಬಿರವು ದಿನಾಂಕ 20/06/2020 ನೇ ಶನಿವಾರದಂದು ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್ ಸೌದಿ ಅರೇಬಿಯಾ ಇಲ್ಲಿ ಯಶಸ್ವಿಯಾಗಿ ನಡೆಯಿತು.









ಬಹಳ ಉತ್ಸಾಹದಿಂದ ನಡೆದ ಅನಿವಾಸಿಗರ ರಕ್ತದಾನ





ಬಹಳ ಹುಮ್ಮಸ್ಸಿನಿಂದ ಭಾಗವಹಿಸಿ ಅನಿವಾಸಿ ಕನ್ನಡಿಗರ ಸಹಿತ ವಿವಿಧ ರಾಜ್ಯಗಳ ಬರೋಬ್ಬರಿ 51 ರಕ್ತದಾನಿಗಳು
ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಕೋವಿಡ್ ವೇಳೆಯಲ್ಲೂ ಬಹಳ ಸುರಕ್ಷಿತವಾಗಿ ಹಮ್ಮಿಕೊಂಡ ಈ ರಕ್ತದಾನ ಶಿಬಿರವು ರಕ್ತನಿಧಿಗಳ ವೈದ್ಯಾಧಿಕಾರಿಗಳು ಹಾಗೂ ರಕ್ತದಾನಿಗಳ ಸಹಕಾರದಿಂದ ಬಹಳ ಯಶಸ್ವಿಯಾಗಿ ನೆರವೇರಿತು.





ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫಾರಂ ಜುಬೈಲ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ನಝೀರ್ ಅವರು ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿಕೊಂಡು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಐ.ಎಸ್ .ಎಫ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯ ನಿರ್ವಾಹಕರಾದ ಇರ್ಷಾದ್ ಉಚ್ಚಿಲ ,ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬತೀನ್ ಇದರ ವೈದ್ಯಾಧಿಕಾರಿ ಡಾ|ವಿಜಯ್ ಗಾಯಲ್ , ಇಂಡಿಯನ್ ಸೋಷಿಯಲ್ ಫೋರಂ ಇದರ ಸದಸ್ಯರಾದ ಅಶ್ರಫ್ ಕೂಳೂರು ಜುಬೈಲ್ ಹಾಗೂ ಶೇಖ್ ಅಡ್ಯಾರ್ ಜುಬೈಲ್ ಉಪಸ್ಥಿತರಿದ್ದರು.





ಇಂಡಿಯನ್ ಸೋಷಿಯಲ್ ಫೋರಂ ಇದರ 15 ಕ್ಕೂ ಹೆಚ್ಚು ಕಾರ್ಯಕರ್ತರು ಸುಗಮ ರಕ್ತದಾನ ಶಿಬಿರಕ್ಕಾಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.





ಗೌರವ ಸ್ಮರಣಿಕೆ:-
ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ದೇಶ ವಿದೇಶದಲ್ಲಿನ ನಿಸ್ವಾರ್ಥ ಸೇವೆ ಹಾಗೂ ಶಿಬಿರದ ಯಶಸ್ವಿಯ ಫಲವಾಗಿ ಸೆಂಟ್ರಲ್ ಬ್ಲಡ್ ಬ್ಯಾಂಕ್ ಆಡಳಿತ ಮಂಡಳಿಯು ಬಿಡಿಎಂ ಸಂಸ್ಥೆಗೆ ಕಿರುಕಾಣಿಗೆ ಗೌರವಪೂರ್ವಕವಾಗಿ ಕಾರ್ಯನಿರ್ವಾಹಕರಾದ ಇರ್ಷಾದ್ ಉಚ್ಚಿಲ ಇವರಿಗೆ ಹಸ್ತಾಂತರಿಸಿದರು.













ಮಧ್ಯಮ ವಿಭಾಗ:-ಬ್ಲಡ್ ಡೋನರ್ಸ್ ಮಂಗಳೂರು(ರಿ)










Comments

Popular posts from this blog

ಸಹೋದರತೆ ಸಾರುವ ಈದ್ ಉಲ್ ಫಿತರ್ ಹಬ್ಬಕ್ಕೆ ಶುಭ ಸಂದೇಶ ಸಾರಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆ

ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...

ತುರ್ತು ರಕ್ತದಾನ ಮಾಡಿ ಜೀವದಾನಿಗಳಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರು …!

ಸೆಪ್ಟೆಂಬರ್ 03 :-ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಚೌಡೇಶ್  ದಾವಣಗೆರೆ ಎಂಬವರಿಗೆ ತುರ್ತಾಗಿ 2 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಕಾರ್ಯನಿರ್ವಾಹಕರಾದ  ಸಾಮಾಜಿಕ ಕಾರ್ಯಕರ್ತ * ಶಾಹುಲ್ ಹಮೀದ್ ಕಾಶಿಪಟ್ಣ ಹಾಗೂ ಜಮಾಲ್ ಕಲ್ಲಡ್ಕ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!

ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ * ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)