ಮೇ 17 :- ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಮಾಧವ ಮರ್ಕಂಜ ಎಂಬವರಿಗೆ ತುರ್ತಾಗಿ 2 ಯುನಿಟ್ AB+ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಕ್ರಿಯ ಸದಸ್ಯರಾದ ಸುಳ್ಯದ ಆಪತ್ಬಾಂಧವ ಫೈಝಲ್ ಕಟ್ಟೆಕ್ಕಾರ್ ಅವರ ಕರೆಗೆ ಸ್ಪಂದಿಸಿದ KA-21 ಸುಳ್ಯ ಇದರ ಸದಸ್ಯರಾದ ಸಮಾಜ ಸ್ನೇಹಿಗಳಾದ ಇಶ್ರತ್ ಕನಕಮಜಲು ಹಾಗೂ ಸಮದ್ ಹಾಜಿ ಕಲ್ಲಪಳ್ಳಿ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಲಾಕ್ ಡೌನ್ ಸಂದ್ರಿಕ್ತ ಪರಿಸ್ಥಿತಿಯಲ್ಲೂ,ರಮ್ಝಾನ್ ವೃತವನ್ನಾಚರಿಸಿದ ದಣಿವನ್ನೂ ಲೆಕ್ಕಿಸದೆ
ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment