ಮೇ 25:-ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಗಂಗಮ್ಮ ಎಂಬವರಿಗೆ ತುರ್ತಾಗಿ O ಪಾಸಿಟಿವ್ (O+)ರಕ್ತದ ಅವಶ್ಯಕತೆಯಿದ್ದಾಗ ಕೂಡಲೇ ನಮ್ಮ ಸಂಸ್ಥೆಯ ಸದಸ್ಯರಾದ ಫೈಝಲ್ ಕಟ್ಟೆಕ್ಕಾರ್ ಅವರ ಕರೆಗೆ ಸ್ಪಂದಿಸಿದ ನಿರಂತರವಾಗಿ ರಕ್ತದಾನ ಮಾಡುತ್ತಿರುವ ಸಮಾಜಸ್ನೇಹಿ ಯುವಕರಾದ KA-21 ಸುಳ್ಯ ವಾಟ್ಸಾಪ್ ಗ್ರೂಪಿನ ಸದಸ್ಯರಾದ ರಾಫಿ ಸುಳ್ಯ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಲಾಕ್ ಡೌನ್ ಸಂದ್ರಿಕ್ತ ಸಮಯದಲ್ಲಿ ಒಂದು ಜೀವದ ಉಳಿವಿಗಾಗಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ತಮಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :- ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment