ಮೇ 17 :- ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಪಿ.ಜಿ ಮುತ್ತಾವ ಮಡಿಕೇರಿ ಎಂಬವರಿಗೆ ತುರ್ತಾಗಿ 2 ಯುನಿಟ್ A+ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಕ್ರಿಯ ಸದಸ್ಯರಾದ KA-21 ಗ್ರೂಪ್ ಅಡ್ಮಿನ್ ಫೈಝಲ್ ಕಟ್ಟೆಕ್ಕಾರ್ ಸುಳ್ಯ ಅವರ ಕರೆಗೆ ಸ್ಪಂದಿಸಿದ KA-21 ಸುಳ್ಯ ವಾಟ್ಸಾಪ್ ಗ್ರೂಪ್ ಇದರ ಸದಸ್ಯರಾದ ಸಮಾಜ ಸ್ನೇಹಿಗಳಾದ ನಾಸಿರ್ ಕಮ್ಮಾಡಿ ಹಾಗೂ ಉಬೈಝ್ ಬೇಬಿ ಝೋನ್ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಲಾಕ್ ಡೌನ್ ಸಂದ್ರಿಕ್ತ ಪರಿಸ್ಥಿತಿಯಲ್ಲೂ,ರಮ್ಝಾನ್ ವೃತವನ್ನಾಚರಿಸಿದ ದಣಿವನ್ನೂ ಲೆಕ್ಕಿಸದೆ
ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment