ಮೇ 11 :- ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಯಲ್ಲಿ ಒಳರೋಗಿಯಾಗಿರುವ ಯಾಸ್ಮೀನ ಎಂಬವರಿಗೆ ತುರ್ತಾಗಿ 5 ಯೂನಿಟ್ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಸಕ್ರಿಯ ಸದಸ್ಯರಾದ ಶಫೀಕ್ ಉಳ್ಳಾಲ,ಅಶ್ರಫ್ ಮಂಜನಾಡಿ ,ಮುಸ್ತಫಾ ಕಲ್ಲರಕೋಡಿ ,ಅಲಿ ಮೊಂಟೆಪದವು ಹಾಗೂ ಝಿಯಾದ್ ಮಾಡೂರು ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ಇಫ್ತಾರ್ ಬಳಿಕ ದಣಿವನ್ನು ಲೆಕ್ಕಿಸದೆ ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment