ಮೇ 18 :- ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಂದು ಒಳರೋಗಿಯಾದ ಪುಟ್ಟ ಕಂದಮ್ಮ ಶಮೀಮ್ ಯಾಕೂಬ್ ಎಂಬ ರೋಗಿಗೆ ತುರ್ತಾಗಿ AB+ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಸದಸ್ಯರಾದ ಕ್ರಿಯಾಶೀಲ ಸಮಾಜ ಸೇವಕರಾದ ಶಾಫಿ ಪಾಲ್ತಾಡ್ ಮತ್ತು ರವೂಫ್ ಪಾಲ್ತಾಡ್ ಅವರ ವಿಶೇಷ ಮುತುವರ್ಜಿಯಲ್ಲಿ ನಿರಂತರ ರಕ್ತದಾನಿಗಳಾದ ಭವಿತ್ ಕುಮಾರ್ ಪಾಲ್ತಾಡ್ ,ಸುನಿಲ್ ಹಾಗೂ ರಫೀಕ್ ಇಂದಬೆಟ್ಟು ಬೆಳ್ತಂಗಡಿ ಇವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಸಾಮರಸ್ಯ ಹದಗೆಡುತ್ತಿರುವ ಈ ಕಾಲದಲ್ಲಿ ಒಂದು ಕಂದಮ್ಮನ ಜೀವ ಉಳಿಸಲು ಕ್ಷಣ ಮಾತ್ರದಲ್ಲಿ ಜೀವದಾನಿಗಳಾಗಿ ಸ್ಪಂದಿಸಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃದಯಾಂತರಾಳದ ಕೃತಜ್ಞತೆಗಳು.
ಆ ಮಗು ಶೀಘ್ರವೇ ಗುಣಮುಖಗೊಳ್ಳಲಿ ಎಂಬ ಪ್ರಾರ್ಥನೆಯೊಂದಿಗೆ ,
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment