ಮೇ 10:- ಯೇನಪೋಯ ಆಸ್ಪತ್ರೆ ದೇರಳಕಟ್ಟೆಯಲ್ಲಿ ಒಳರೋಗಿಯಾಗಿರುವ ಮನೀಷಾ ಸಂಪಾಜೆ ಎಂಬವರಿಗೆ ತುರ್ತಾಗಿ O+ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಕಾರ್ಯನಿರ್ವಾಹಕರ ಕರೆಗೆ ತಕ್ಷಣ ಸ್ಪಂದಿಸಿದ ಆಲ್ ರೈಡರ್ಸ್ ಕ್ಲಬ್ ಕರ್ನಾಟಕ ಇದರ ಅಡ್ಮಿನ್ ಆಗಿರುವ ಫೈಝಲ್ ಸಹರಾ ,ಸಹರಾ ಬೈಕ್ ರೈಡರ್ಸ್ ಮಂಗಳೂರು ಸದಸ್ಯ ಅಶ್ರಫ್ ಮಂಜನಾಡಿ ,ಆಲ್ ರೈಡರ್ಸ್ ಕರ್ನಾಟಕ ಇದರ ಸದಸ್ಯರುಗಳಾದ ಅಸ್ಲಂ ಮಂಜನಾಡಿ ಹಾಗೂ ನಿಝಾಂ ಮಂಗಳೂರು ಇವರೆಲ್ಲರೂ ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ಇಫ್ತಾರ್ ಬಳಿಕ ದಣಿವನ್ನು ಲೆಕ್ಕಿಸದೆ ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment