ಕಲ್ಲಡ್ಕ :- ಝಮಾನ್ ಬೊಯ್ಸ್(ರಿ) ಕಲ್ಲಡ್ಕ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಂಟಿ ಸಹಯೋಗದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಹಕಾರದಲ್ಲಿ ಮರ್ಹೂಂ ಯೂಸುಫ್ ಹಾಜಿ ಹಜಾಜ್ ಕಲ್ಲಡ್ಕ ಹಾಗೂ ಮರ್ಹೂಂ ಅಝ್ಮಾನ್(ಅಪ್ಪು) ಸ್ಮರಣಾರ್ಥವಾಗಿ ದಿನಾಂಕ ಮೇ 29 ಶುಕ್ರವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12:30 ರ ವರೆಗೆ ರಕ್ತದಾನ ಶಿಬಿರವು ಝಮಾನ್ ಬೊಯ್ಸ್ ಕಚೇರಿ ಬಳಿ ಸೂರಜ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಕೋವಿಡ್ ಸಂದ್ರಿಕ್ತ ವೇಳೆಯಲ್ಲಿ ಜಿಲ್ಲೆಯ ಹಲವು ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ ,ತಲಸ್ಸೇಮಿಯಾ ರೋಗಿಗಳಿಗೆ ,ಅಪಘಾತ ಪೀಡಿತ ರೋಗಿಗಳ ತುರ್ತು ಚಿಕಿತ್ಸೆಗಳಿಗೆ ಹಾಗೂ ಗರ್ಭಿಣಿಯರಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವ ಬಹಳಷ್ಟಿದೆ.
ಇದನ್ನು ಮನಗಂಡು ಸಕಲ ಸುರಕ್ಷತೆಯಿಂದ ಹಮ್ಮಿಕೊಂಡಿರುವ ಈ ತುರ್ತು ರಕ್ತದಾನ ಶಿಬಿರದಲ್ಲಿ ಹೆಚ್ಚಾಗಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಿರಿ
+919972660330
+918904569787
+917411773451
+918197832460
+919901090586
ಮಾಧ್ಯಮ ವಿಭಾಗ :ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment