ಮೇ 29:- ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ತುರ್ತಾಗಿ O ಪಾಸಿಟಿವ್ (O+)ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಬಿಡಿಎಂ ಪುತ್ತೂರು ತಾಲೂಕು ಇದರ ಸದಸ್ಯರಾದ ಸುಜಿತ್ ಕೈಕಾರ ಅವರ ವಿಶೇಷ ಮುತುವರ್ಜಿಯಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರಿನಲ್ಲಿ ರಾಜೇಶ್ ರೈ ಕೈಕಾರ,ಜಗದೀಶ್ ಗೌಡ ಮರಿಕೆ ಹಾಗೂ ರಿಝ್ವಾನ್ ಸಂಟ್ಯಾರ್ ಇವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment