ಮೇ 21:- ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಅಶ್ವಿನ್ ಎಂಬ 2 ತಿಂಗಳ ನವಜಾತ ಶಿಶುವಿಗೆ ತುರ್ತಾಗಿ 1 ಯುನಿಟ್ A ಪಾಸಿಟಿವ್ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಸಕ್ರಿಯ ಸದಸ್ಯರಾದ ಸಮಾಜಸ್ನೇಹಿ ಶಾಫಿ ಪಾಲ್ತಾಡ್ ಅವರ ವಿಶೇಷ ಮುತುವರ್ಜಿಯಲ್ಲಿ ಮೊಹಮ್ಮದ್ ರಫೀಕ್ ಒಕ್ಕೆತ್ತೂರು ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ದಣಿವನ್ನು ಲೆಕ್ಕಿಸದೆ ಪುಟ್ಟ ಕಂದಮ್ಮನ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment