ಮೇ 26 ಮಂಗಳವಾರ 2020
ಯೇನಪೋಯ ಆಸ್ಪತ್ರೆಯ ವಿಶೇಷ ರಕ್ತದ ಅಭಾವದ ತುರ್ತು ಬೇಡಿಕೆಯ ಮೇರೆಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಕಾರ್ಯನಿರ್ವಾಹಕರ ಕರೆಗೆ ತಕ್ಷಣ ಕಾರ್ಯಪ್ರವೃತ್ತರಾದ 24×7 ಕಾರ್ಯನಿರ್ವಾಹಕರಾದ ನಾಸಿರ್ ಕೆರಬೈಲ್ ಇವರು ಸ್ವತಃ ರಕ್ತದಾನ ಮಾಡುವುದರ ಜೊತೆ ಶಫೀಕ್ ಕೆರಬೈಲ್,ರಮೀಝ್ ಕೆರಬೈಲ್,ತೌಸೀಫ್ ಕೆರಬೈಲ್ ಹಾಗೂ ನಿಸಾರ್ ಕೆರಬೈಲ್ ಈದ್ ಹಬ್ಬದ ಪ್ರಯುಕ್ತ ರಕ್ತದಾನ ಮಾಡುವುದರೊಂದಿಗೆ ಮಾನವೀಯತೆ ಮೆರೆದರು.
ತುರ್ತು ಅಗತ್ಯದ ಸಂಧರ್ಭದಲ್ಲಿ ರಕ್ತದಾನ ಮಾಡಿ ಮಾದರಿಯಾದ ನಿಮಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಕೋರೋನ ಬಗ್ಗೆ ಭಯ ಬೇಡ….ಎಚ್ಚರ ಇರಲಿ
ಮಾಧ್ಯಮ ವಿಭಾಗ:-
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment