ಮೇ ೦2 :- ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಅಲೀಮ ಎಂಬವರಿಗೆ ತುರ್ತಾಗಿ O ನೆಗೆಟಿವ್ (O-) ರಕ್ತದ ಅವಶ್ಯಕತೆಯಿದ್ದಾಗ ನಮ್ಮ ಸಂಸ್ಥೆಯ ಕಾರ್ಯ ನಿರ್ವಾಹಕರ ಕರೆಗೆ ಕೂಡಲೇ ಸ್ಪಂದಿಸಿದ ಕಾಸ್ಕ್ ನರಿಂಗಾನದ ಸದಸ್ಯರಾದ ಯೂಸುಫ್ ಹೈದರ್ ಕಲ್ಲರಕೋಡಿ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಲಾಕ್ ಡೌನ್ ಭೀತಿಯ ಮಧ್ಯೆ ರಕ್ತನಿಧಿಗಳಲ್ಲಿ ರಕ್ತದ ಅಭಾವವನ್ನರಿತು ಕೂಡಲೇ ರೋಗಿಯ ಜೀವ ಉಳಿಸಲು ರಮ್ಝಾನ್ ಉಪವಾಸ ತೊರೆದ ತಕ್ಷಣ ಸ್ಪಂದಿಸಿದ ಸಾಮಾಜಿಕ ಕಳಕಳಿಯುಳ್ಳ ಕಲ್ಲರಕೋಡಿಯ ಈ ಆಪತ್ಬಾಂಧವನಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ಬ್ಲಡ್ ಡೋನರ್ಸ್ ಮಂಗಳೂರು (ರಿ)

Comments
Post a Comment