ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ವತಿಯಿಂದ ದುಬೈಯಲ್ಲಿ ಯಶಸ್ವೀ ತುರ್ತು ರಕ್ತದಾನ ಶಿಬಿರ
ದುಬೈ ಮೇ 19 :- ಬದ್ರಿಯ ಫ್ರೆಂಡ್ಸ್ ಯು.ಎ.ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ.) ಇದರ ಜಂಟಿ ಸಹಭಾಗಿತ್ವದಲ್ಲಿ ಲತೀಫಾ ಬ್ಲಡ್ ಬ್ಯಾಂಕ್ ದುಬೈ-ಯು.ಎ.ಇ ಇದರ ಸಹಕಾರದೊಂದಿಗೆ ತುರ್ತು ರಕ್ತದಾನ ಶಿಬಿರವು ಬಹಳ ಯಶಸ್ವಿಯಾಗಿ ಅಲ್ ವಸ್ಲ್ ಸ್ಪೋರ್ಟ್ಸ್ ಕ್ಲಬ್ ದುಬೈ ಇಲ್ಲಿ ನಡೆಯಿತು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ ,ತಲಸ್ಸೇಮಿಯಾ ರೋಗಿಗಳಿಗೆ ,ಅಪಘಾತ ಪೀಡಿತ ರೋಗಿಗಳ ತುರ್ತು ಚಿಕಿತ್ಸೆಗಳಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವವಿರುವುದನ್ನು ಮನಗಂಡು ಲತೀಫಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಈ ತುರ್ತು ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತ ವಿಧಾನಗಳೊಂದಿಗೆ ಒಟ್ಟು 43 ಮಂದಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಜೀವದಾನಿಗಳಾದರು.
ಸಂಕಷ್ಟದ ವೇಳೆಯಲ್ಲೂ ಮಾನವೀಯ ರೀತಿಯಲ್ಲಿ ಹೃದಯವಂತಿಕೆಯನ್ನು ಸದಾ ತೋರ್ಪಡಿಸುವ ಅನಿವಾಸಿ ಭಾರತೀಯರ ಈ ಸಮಯಪ್ರಜ್ಞೆಗೆ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಶ್ಲಾಘನೆಯನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಇದರ ಆಯೋಜಕರಾದ ಅಬ್ದುಲ್ ರಹಿಮಾನ್ ಪೊಯ್ಯಲ್,ಅನ್ವರ್ ಸಾದಾತ್ , ಮೊಹಮ್ಮದ್ ಶಫಾಫ್,ಮೊಹಮ್ಮದ್ ಇರ್ಷಾದ್ ಓರಿಯನ್ ,ಮುಶೀರ್ ,ಅಲ್ತಾಫ್,ತೌಫೀಕ್ ಬೆಂಗರೆ,ಆಸಿಫ್ ಬೆಂಗರೆ ಹಾಗೂ ಉಮ್ಮರ್ ಫಾರೂಕ್ ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು ಎ ಇ ಕಾರ್ಯ ನಿರ್ವಾಹಕರಾದ ಜಬ್ಬಾರ್ ಕೆ.ಕೆ ಕಲ್ಲಡ್ಕ(ಝಮಾನ್ ಬಾಯ್ಸ್),ಸದಸ್ಯರಾದ ಮೊಹಮ್ಮದ್ ಸಾದಿಕ್ ಪುತ್ತೂರು ಶಿಬಿರದ ಸ್ವಯಂ ಸೇವಕರಾಗಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರಾದ ನಝೀರ್ ಅಹಮದ್ ದುಬೈ ಅವರು ಯಶಸ್ವೀ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ ;-
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment