ನವಜಾತ ಶಿಶುವಿನ ಜೀವ ಉಳಿಸಲು ಉಪವಾಸ ತೊರೆದು ರಕ್ತದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಬಿಡಿಎಂ ಸದಸ್ಯ ಆಸಿಫ್ ಕಲ್ಲರಕೋಡಿ
ಮೇ 15 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಜಯಲಕ್ಷ್ಮಿ ಎಂಬ ಮಹಿಳೆಯ 9 ದಿನದ ಹಸುಗೂಸಿಗೆ ತುರ್ತಾಗಿ 1 ಯುನಿಟ್ A ಪಾಸಿಟಿವ್ (A+) ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಸದಸ್ಯರಾದ ಆಸಿಫ್ ಕಲ್ಲರಕೋಡಿ ಅವರು ಮಗುವಿನ ಜೀವ ಉಳಿಸಲು ಉಪವಾಸ ತೊರೆದು ರಕ್ತದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದರು.
ರಮ್ಝಾನ್ ಉಪವಾಸದ ವೇಳೆಯಲ್ಲಿ ರಕ್ತದಾನ ಮಾಡಿದರೆ ಉಪವಾಸಕ್ಕೆ ಭಂಗ ತರುತ್ತದೆ ಎಂಬುದು ವಾಸ್ತವ .ನವಜಾತ ಶಿಶುವಿನ ಜೀವಕ್ಕೆ ಅಪಾಯವಾಗುತ್ತಿದೆ ಎಂದು ತಿಳಿದ ತಕ್ಷಣ ರಕ್ತದಾನ ಮಾಡುವುದಕ್ಕೆ ವೃತಾಚರಣೆಯನ್ನು ಉಪೇಕ್ಷಿಸಿ ಕಂದಮ್ಮನ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment