ಮೇ 15 :- ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ನೀಲಮ್ಮ ಎಂಬವರಿಗೆ ತುರ್ತಾಗಿ 1 ಯುನಿಟ್ B ಪಾಸಿಟಿವ್ (B+)ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಸುಳ್ಯದ ಆಪತ್ಬಾಂಧವ ಫೈಝಲ್ ಕಟ್ಟೆಕ್ಕಾರ್ ಅವರ ವಿಶೇಷ ಮುತುವರ್ಜಿಯ ಕರೆಗೆ ಸ್ಪಂದಿಸಿದ ಪೀಟರ್ ಕಟ್ಟೆಕ್ಕಾರ್ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಮಾನವೀಯತೆಯ ಪ್ರತಿರೂಪವೆಂಬಂತೆ ಹಿಂದೂ ಮಹಿಳೆಗೆ ಮುಸ್ಲಿಂ ಸಹೋದರನ ಕರೆಗೆ ಓಗೊಟ್ಟು ಕ್ರೈಸ್ತ ಸಹೋದರ ರಕ್ತದಾನ ಮಾಡಿದ್ದು ಬಹಳ ಶ್ಲಾಘನೀಯ. ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment