ಸಂದ್ರಿಕ್ತ ಪರಿಸ್ಥಿತಿಯಲ್ಲೂ ನಿರಂತರವಾಗಿ ರೋಗಿಗಳಿಗೆ ನೆರವಾಗುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕ
ಲಾಕ್ ಡೌನ್ ಮಧ್ಯೆಯೂ ರೋಗಿಗಳಿಗೆ ಬೇಕಾಗುವ ಅತ್ಯವಶ್ಯಕ ಔಷಧಿಗಳನ್ನು ನಿರಂತರವಾಗಿ ತಲುಪಿಸುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಉಪಾಧ್ಯಕ್ಷರಾದ ಮುನೀರ್ ಚೆಂಬುಗುಡ್ಡೆಯವರು ಇಂದು ಕೂಡ ಮಂಗಳೂರಿನಿಂದ ತಲಪಾಡಿಯ ಕಡೆಗೆ ಮೆಡಿಸಿನ್ ಪೂರೈಕೆ ಮಾಡಿ ಕ್ಲಪ್ತ ಸಮಯದಲ್ಲಿ ತುರ್ತು ಕರೆಗೆ ಸ್ಪಂದಿಸಿರುತ್ತಾರೆ.
ಎಲ್ಲರೂ ಮನೆಯಲ್ಲಿರಬೇಕಾದರೆ ಈ ವ್ಯಕ್ತಿಯ ಮನಸ್ಸು ಮಾತ್ರ ಸಮಾಜಕ್ಕಾಗಿ ಮಿಡಿಯುತ್ತಿದೆ .ಸುರಕ್ಷತೆಯ ಕವಚಗಳನ್ನು ಅಳವಡಿಸಿಕೊಂಡೇ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ (ವಿಶೇಷವಾಗಿ ದ.ಕ ಜಿಲ್ಲೆ ಸಂಪೂರ್ಣ ಬಂದ್ ) ನಡುವೆಯೂ ಔಷಧಿ ಪೂರೈಸುತ್ತಿರುವ ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಪ್ರಶಂಶನೀಯ..
ಅಲ್ಲಾಹನು ತಮ್ಮೆಲ್ಲ ಸದುದ್ದೇಶಗಳನ್ನು ಈಡೇರಿಸಲಿ ..ಆಮೀನ್
ತಾವು ನಮ್ಮ ಸಂಸ್ಥೆಯ ಕಾರ್ಯ ನಿರ್ವಾಹಕರೆಂಬುದರಲ್ಲಿ ನಿಜಕ್ಕೂ ಅಭಿಮಾನವಿದೆ ಬ್ರದರ್…👍👍💐💐🥰🥰❤️
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment