ಮಾರ್ಚ್ 24: ಸಿ.ಟಿ ಆಸ್ಪತ್ರೆ ಪುತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುನಿತಾ ಶೆಟ್ಟಿ ಎಂಬ ಮಹಿಳಾ ರೋಗಿಗೆ ಎ ಪೊಸಿಟಿವ್ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ಮುಕ್ತಾರ್ ಕುಂಬ್ರ ಇವರ ಕರೆಗೆ ರಾಜ್ಯದಲ್ಲಿ ಲಾಕ್ ಡೌನ್
ಜಾರಿಯಲ್ಲಿದ್ದರೂ ಇನ್ನೊಂದು ಜೀವದ ಮಹತ್ವ ಅರಿತು ತಕ್ಷಣ ಸ್ಪಂಧಿಸಿದ ಆಚಿ ಕೌಡಿಚಾರ್,ಹಸೈನಾರ್ ಅಜ್ಜಿಕಟ್ಟೆ ಮತ್ತು ಅಶ್ರಫ್ ಕಟ್ಟೆ ರಕ್ತದಾನ ಮಾಡಿ ಸಹಕರಿಸಿದರು.ತುರ್ತು ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣವಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು…
ಒಂದು ಯೂನಿಟ್ ರಕ್ತ ಮೂರು ಜೀವ ಉಳಿಸುತ್ತದೆ ಎಂಬ ಮನೋಸ್ಥೈರ್ಯದೊಂದಿಗೆ ರಕ್ತದಾನ ಮಾಡಿ ಜೀವ ಉಳಿಸಿ.
Comments
Post a Comment