ಜಿಲ್ಲಾಧಿಕಾರಿಗೆ ಬಹಿರಂಗ ಪತ್ರ
✉✉✉✉✉✉✉✉✉
ರಿಂದ,
ಬ್ಲಡ್ ಡೋನರ್ಸ್ ಮಂಗಳೂರು (ರಿ)_
• ಮಾಸ್ಕ್ ಮತ್ತು ಸ್ಯಾನಿಟೈಜರ್ ಬೆಲೆ ಸ್ವನಿಗದಿಪಡಿಸಿ ವಿತರಣೆ.
• ಔಷಧಿ ವಿತರಕರಿಗೆ ರೋಗವೇ ಬಂಡವಾಳ.
• ಜಿಲ್ಲಾಡಳಿತವೇ ಇದಕ್ಕೆಲ್ಲ ಕಡಿವಾಣ ಹಾಕಲು ಸಾಧ್ಯವಿಲ್ಲವೇ.
ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ರಾಜ್ಯದಲ್ಲೂ ತಾಂಡವ ಆಡಿದ್ದು, ಜನರೆಡೆಯಲ್ಲಿ ಭೀತಿ ಸೃಷ್ಟಿಸಿದೆ.
ಇದರಿಂದ ಜನರು ಮುನ್ನೆಚ್ಚರಿಕಾ ಸಲುವಾಗಿ ಮಾಸ್ಕ್ ಗಳ ಮೊರೆಹೋಗಿದ್ದು, 'ಮಾಸ್ಕ್'ಗಳಿಗೆ ಭಾರಿ ಬೇಡಿಕೆ ಬಂದಿದೆ.
ಹೀಗಿರುವಾಗ ಮಾಸ್ಕ್ಗಳ ಬೆಲೆ ಔಷಧಾಲಯಗಳೇ ದಿಢೀರ್ ಗಗನಕ್ಕೇರಿಸಿದ್ದಾರೆ. ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಅಥವಾ ಕೈಗೆಟಕದ ರೀತಿಯಲ್ಲಿ ಬೆಲೆ ನಿಗದಿಪಡಿಸಿದ್ದು ಸಾರ್ವಜನಿಕರು ತೊಂದರೆಗೊಳಪಟ್ಟಿದ್ದಾರೆ.
ರಾಜ್ಯದ ಮೆಡಿಕಲ್ ಶಾಪ್ಗಳಲ್ಲಿ 5 ರೂ.ಗೆ ಸಿಗುತ್ತಿದ್ದ ಮಾಸ್ಕ್ಗಳು ಕೇವಲ ಒಂದೇ ತಿಂಗಳ ಅವಧಿಯಲ್ಲಿ 50 ರೂ.ನಿಂದ 75 ರೂ.ಗೆ ಏರಿಕೆಯಾಗಿ ಮಾರಾಟವಾಗುತ್ತಿವೆ. ಇನ್ನು ಬಹುತೇಕ ಕಡೆಗಳಲ್ಲಿ ಮಾಸ್ಕ್ಗಳು ಸ್ಟಾಕ್ ಇಲ್ಲ. ನಗರದಲ್ಲಿನ ಬಹಳಷ್ಟು ಮೆಡಿಕಲ್ ಶಾಪ್ಗಳು ಮಾಸ್ಕ್ ಸ್ಟಾಕ್ ಇಲ್ಲದೇ ಗ್ರಾಹಕರನ್ನು ವಾಪಸ್ ಕಳುಹಿಸುತ್ತಿವೆ. ಬೆಂಗಳೂರು, ಸುತ್ತಮತ್ತಲಿನ ಸರ್ಜಿಕಲ್ ಉತ್ಪನ್ನಗಳ ಉತ್ಪಾದಕ ಘಟಕಗಳು ಮತ್ತು ಹೊರ ರಾಜ್ಯಗಳಿಂದಲೂ ಮಾಸ್ಕ್ಗಳು ನಗರಕ್ಕೆ ಬರುತ್ತಿದ್ದವು. ಆಸ್ಪತ್ರೆ ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ ಮಾಸ್ಕ್ಗಳನ್ನು ಸಾರ್ವಜನಿಕರು ಖರೀದಿ ಮಾಡುತ್ತಿದ್ದರು. ಆದರೆ ಇದೀಗ ಕೋರೋನ ವೈರಸ್ ತಡೆಗಟ್ಟುವ ಸಲುವಾಗಿ ಜನರು ಮಾಸ್ಕ್ ಮೊರೆಹೋಗಿದ್ದು ಮಾಸ್ಕ್ ಬೇಡಿಕೆ ಹೆಚ್ಚಾಗಿದೆ.
ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಸಹ ಹೆಚ್ಚಳಗೊಂಡಿದೆ. ಇದರಿಂದಾಗಿ ಸ್ಯಾನಿಟೈಜರ್ಗಳಿಗೆ ದೇಶದಾದ್ಯಂತ ಭಾರೀ ಬೇಡಿಕೆ ಉಂಟಾಗಿದ್ದು, ಬೆಲೆಯನ್ನು ಔಷಧಿ ವಿತರಕರು ಸ್ವನಿಗದಿಪಡಿಸಿದ್ದು ಜನರಿಗೆ ತೊಂದರೆ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಂಟಾಗಿರುವ ಈ ರೀತಿಯ ತೊಂದರೆಯನ್ನು ನಿವಾರಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಚಿವರು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕಾಗಿ ವಿನಂತಿಸುತ್ತಿದ್ದೇವೆ.
ಮನವಿ:
ಅಧ್ಯಕ್ಷರು ಮತ್ತು ಸದಸ್ಯರು
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment